ಮೈಸೂರು , ಫೆಬ್ರವರಿ 5 2025 – ಪ್ರಮುಖ ಸಂಯೋಜಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಯಾದ ಸೈಯಂಟ್ ಡಿಎಲ್ಎಂ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯೆಡೆಗಿನ (ಸಿಎಸ್‌ಆರ್) ತನ್ನ ನಿರಂತರ ಬದ್ಧತೆಯ ಭಾಗವಾಗಿ, ಭಾರತದಲ್ಲಿನ ಶಿಕ್ಷಣವನ್ನು ಸುಧಾರಿಸುವತ್ತ ಮತ್ತು ಸಮುದಾಯ ಅಭಿವೃದ್ಧಿಯನ್ನು ಬೆಂಬಲಿಸುವತ್ತ ಮಹತ್ವದ ಹೆಜ್ಜೆಗಳನ್ನು ಹಾಕುತ್ತಿದೆ. ಕಂಪನಿಯು ತನ್ನ ಇತ್ತೀಚಿನ ಉಪಕ್ರಮಗಳಲ್ಲಿ, ಮೈಸೂರಿನ ಬಸ್ತಿಪುರ ಮತ್ತು ಕುಂಬಾರಕೊಪ್ಪಲ್ ಪ್ರದೇಶಗಳಲ್ಲಿ ದತ್ತು ಪಡೆದ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ನವೀಕರಿಸುವ ಮತ್ತು ಛಾವಣಿಯ ಅಳವಡಿಕೆ ಮೂಲಕ ಜಲನಿರೋಧಕ ಪರಿಹಾರಗಳನ್ನು ಒದಗಿಸಿ ಶಾಲಾ ಕಟ್ಟಡಗಳನ್ನು ರಕ್ಷಿಸುವ ಮೂಲಕ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡಿದೆ.

ಸೈಯಂಟ್ ಡಿಎಲ್‌ಎಂ ಮತ್ತು ಸೈಯಂಟ್‌ನ ಹಿರಿಯ ಮುಖ್ಯಸ್ಥರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಹೊಸದಾಗಿ ನವೀಕರಿಸಿದ ಸೌಲಭ್ಯಗಳನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವು, ತನ್ನ ಕಾರ್ಯಾಚರಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕಾರಾತ್ಮಕ ಸಾಮಾಜಿಕ ಬದಲಾವಣೆಯನ್ನು ಮಾಡಬಯಸುವ ಕಂಪನಿಯ ಸಮರ್ಪಣೆಯನ್ನು ಎತ್ತಿ ತೋರಿಸಿತು. ಸೈಂಟ್ ಡಿಎಲ್ಎಂನ ಬಿಸಿನೆಸ್ ಮುಖ್ಯಸ್ಥೆ ಸುಚಿತ್ರಾ ರಾಯ್ರೋತ್, ಸೈಂಟ್‌ನ ಸಿಎಸ್‌ಆರ್ ಮುಖ್ಯಸ್ಥೆ ಕೃಷ್ಣ ದೀವಿ ಮತ್ತು ಸೈಂಟ್ ಡಿಎಲ್‌ಎಂನ ಮಾನವ ಸಂಪನ್ಮೂಲ ಮುಖ್ಯಸ್ಥೆ ನೀರಜಾ ಪೊಲಿಸೆಟ್ಟಿ ಅವರಿದ್ದ ತಂಡವು ಮಕ್ಕಳೊಂದಿಗೆ ತೊಡಗಿಸಿಕೊಂಡು, ಈ ಮೂಲಸೌಕರ್ಯದ ನವೀಕರಣವು, ಈ ಪ್ರದೇಶದ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುವುದನ್ನು ವೀಕ್ಷಿಸಿದರು.

“ಈ ಉಪಕ್ರಮವು, ಶಿಕ್ಷಣ ಮತ್ತು ಸಮುದಾಯದ ಯೋಗಕ್ಷೇಮವನ್ನು ಹೆಚ್ಚಿಸುವ ನಮ್ಮ ಆಳವಾದ ಬದ್ಧತೆಯ ಪ್ರತಿಬಿಂಬವಾಗಿದೆ” ಎಂದು ಸೈಂಟ್ ಡಿಎಲ್ಎಂನ ಬಿಸಿನೆಸ್ ಎಕ್ಸಲೆನ್ಸ್ ಮುಖ್ಯಸ್ಥೆ ಸುಚಿತ್ರಾ ರಾಯ್ರೋತ್ ಹೇಳಿದರು. “ಮೂಲಸೌಕರ್ಯ ನವೀಕರಣಗಳು ಕೇವಲ ಉತ್ತಮ ಶಾಲೆಗಳನ್ನು ನಿರ್ಮಿಸುವುದರ ಕುರಿತಾಗಿರದೇ, ಈ ಸಮುದಾಯದ ಮಕ್ಕಳಿಗೆ ಅವರು ಯಶಸ್ವಿಯಾಗಲು ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವುದರ ಕುರಿತಾಗಿದೆ. ಅವರ ಪ್ರಯಾಣದ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ, ಮತ್ತು ಮುಂದಿನ ವರ್ಷಗಳಲ್ಲಿ ಇದು ಸಕಾರಾತ್ಮಕ ಪರಿಣಾಮ ಬೀರುವುದನ್ನು ನೋಡಲು ಆಶಿಸುತ್ತೇವೆ” ಎಂದು ಹೇಳಿದರು.
ಸೈಂಟ್ ಲಿಮಿಟೆಡ್‌ನ, ಸಿಎಸ್‌ಆರ್ ಅಂಗವಾದ ಸೈಂಟ್ ಫೌಂಡೇಶನ್ ಈ ನವೀಕರಣಗಳನ್ನು ಜಾರಿಗೆ ತಂದಿದ್ದು, ಇದು ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಸಮುದಾಯ ಸಬಲೀಕರಣದ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮಗಳ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಸಮರ್ಪಿತವಾಗಿದೆ. ಈ ಉಪಕ್ರಮವು, ತಾನು ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ಶಾಶ್ವತ, ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವ ಸೈಂಟ್ ಡಿಎಲ್‌ಎಂನ ವಿಶಾಲ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ.