ಚೆನ್ನೈ: ಸತತ ಸೋಲಿನಿಂದಾಗಿ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK)ತಂಡದ ನಾಯಕ ರವೀಂದ್ರ ಜಡೇಜಾ ತಮ್ಮ ನಾಯಕತ್ವವನ್ನು ತ್ಯಜಿಸಿದ್ದು ಎಂಎಸ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಬಗ್ಗೆ ಸ್ವತಃ ಚೆನ್ನೈ ತಂಡ ಟ್ವೀಟ್ ಮಾಡಿ ಘೋಷಿಸಿದೆ. “MS ಧೋನಿಗೆ CSK ನಾಯಕತ್ವವನ್ನು ಹಸ್ತಾಂತರಿಸಲು ಜಡೇಜಾ: ರವೀಂದ್ರ ಜಡೇಜಾ ಅವರು ತಮ್ಮ ಆಟದ ಮೇಲೆ ಹೆಚ್ಚು ಗಮನಹರಿಸಲು ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು MS ಧೋನಿಯವರನ್ನ ತಂಡವನ್ನ ಮುನ್ನಡೆಸಲು ವಿನಂತಿಸಿದ್ದಾರೆ. MS ಧೋನಿ ಅವರು ಹೆಚ್ಚಿನ ಆಸಕ್ತಿಯಿಂದ ಮತ್ತು ಜಡೇಜಾ ಅವರ ಆಟದ ಮೇಲೆ ಕೇಂದ್ರೀಕರಿಸಲು CSK ಅನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ” ಅಂತ ಟ್ವೀಟ್’ನಲ್ಲಿ ತಿಳಿಸಿದೆ.
ಈ ಬಾರಿಯ IPLನಲ್ಲಿ CSK ಫ್ರಾಂಚೈಸಿ ಧೋನಿ ಉತ್ತರಾಧಿಕಾರಿಯಾಗಿ ಜಡೇಜಾರನ್ನ ಆಯ್ಕೆ ಮಾಡಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್ಕೆ ತಂಡ ಸತತ ವೈಫಲ್ಯ ಕಂಡಿದೆ. ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಗೆಲವು ಸಾದಿಸಿದೆ.