ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್(KGF) ಚಿತ್ರ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸದ್ದುಮಾಡುತ್ತಿದೆ. ಕೆಜಿಎಫ್ ಸಿನಿಮಾದ ‘ರಾಕಿ ಬಾಯ್’ (Rocky Bhai) ಪಾತ್ರ ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಿದೆ.
ಇಂತಹ ‘ರಾಕಿ ಬಾಯ್’ ಚಿತ್ರವನ್ನು ಕಲಾವಿದೆಯೊಬ್ಬರು ಜಲ್ಲಿ ಕಲ್ಲುಗಳಲ್ಲಿ ಬಿಡಿಸಿ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಲಾವಿದೆ ಪೂಜಾ ಪ್ರಕಾಶ್ ಭಸ್ಮೆ (Pooja Prakash Bhasme) 13.5 ಅಡಿಯ ‘ರಾಕಿ ಬಾಯ್’ ಚಿತ್ರವನ್ನು ಜಲ್ಲಿ ಕಲ್ಲುಗಳಲ್ಲಿ ಬಿಡಿಸಿ ಕೆಜಿಎಫ್ ಸಿನಿಮಾದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ 👇🏻