ಆಂಧ್ರಪ್ರದೇಶ: ಅಸಾನಿ ಚಂಡಮಾರುತದಿಂದಾಗಿ ಸಮುದ್ರವು ಪ್ರಕ್ಷುಬ್ಧವಾಗಿದ್ದು ನಿಗೂಢ ಚಿನ್ನದ ಬಣ್ಣದ ರಥವೊಂದು(Gold Painted Chariot) ಆಂಧ್ರಪ್ರದೇಶ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ ತೀರಕ್ಕೆ ಕೊಚ್ಚಿಕೊಂಡು ಬಂದಿದೆ.
ಮಂಗಳವಾರ ಸಂಜೆ ಸುನ್ನಪಲ್ಲಿ ಕರಾವಳಿಯಲ್ಲಿ ಕಂಡಂತಹ ಚಿನ್ನದ ಬಣ್ಣದ ರಥದಂತಹ ರಚನೆಯನ್ನ ಗ್ರಾಮಸ್ಥರು ಹಗ್ಗಗಳನ್ನು ಕಟ್ಟಿ ದಡಕ್ಕೆ ತಂದಿದ್ದಾರೆ. ಜಪಾನ್, ಮ್ಯಾನ್ಮಾರ್, ಮಲೇಷ್ಯಾ, ಇಂಡೋನೇಷ್ಯಾ ಅಥವಾ ಥೈಲ್ಯಾಂಡ್ ದೇಶದಿಂದ ಇದು ಕೊಚ್ಚಿಕೊಂಡು ಬಂದಿರಬಹುದು ಎಂದು ಶಂಕಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಮೂಡಿರುವ ‘ಅಸಾನಿ’ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯ ಸಮೀಪ ವಾಯವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.