ಉಡುಪಿ: ದಕ್ಷಿಣ ಭಾರತದ ಪ್ರಸಿದ್ದ ದೇವಾಲಯಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು(Kollur Mookambika Temple) ಒಂದು. ಕೋವಿಡ್ ನಿರ್ಭಂದಗಳ ಸಡಿಲಿಕೆಯ ಹಿನ್ನಲೆ ದೇವಾಲಯಕ್ಕೆ ಭಕ್ತರ ಸಂಖ್ಯೆ ಎರಿಕೆಯಾಗಿದೆ. ಇದರಿಂದಾಗಿ ಹುಂಡಿಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭಕ್ತರು ಮಹಾಪೂರ ದೇಣಿಗೆ ನೀಡಿದ್ದು ಇದೇ ಮೊದಲ ಬಾರಿ ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಹುಂಡಿಯಲ್ಲಿ 1,53,41,923 ರೂ ನಗದು 2,500 ಕೆಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿ ಸಂಗ್ರಹವಾಗಿದ್ದು, ಇದೇ ಮೊದಲ ಬಾರಿಗೆ 1.53. ಕೋಟಿ ನಗದು ಸಂಗ್ರಹವಾಗಿದೆ.
ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕಾಣಿಕೆ ರೂಪದಲ್ಲಿ ನಗದು ಸಂಗ್ರಹವಾಗಿದ್ದು, ಹುಂಡಿ ಕಾಣಿಕೆ ಏಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು.