ಕ್ರಿಸ್‌ಗೇಲ್‌, ಎಬಿಡಿಗೆ ‘ಹಾಲ್ ಆಫ್ ಫೇಮ್’ ಗೌರವ ನೀಡಿದ ಆರ್‌ಸಿಬಿ

ಕ್ರೀಡೆ: ವಿಶ್ವ ಕ್ರಿಕೆಟ್ ಕಂಡಂತಹ ಸ್ಫೋಟಕ ಆಟಗಾರರಾದ ಕ್ರಿಸ್‌ಗೇಲ್ & ಎಬಿ ಡಿವಿಲಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ RCB) ಫ್ರಾಂಚೈಸಿ ಹಾಲ್ ಆಫ್ ಫೇಮ್ ನೀಡಿ ಗೌರವಿಸಿದೆ.

ಈ ಮೂಲಕ ಆರ್‌ಸಿಬಿ ತಂಡ ಫ್ರಾಂಚೈಸಿಗೆ ಸಾಕಷ್ಟು ಕೊಡುಗೆ ನೀಡಿದ ತನ್ನ ಆಟಗಾರರಿಗೆ ಗೌರವಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಗೌರವವನ್ನು ನೀಡುತ್ತದೆ. ಆದರೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಫ್ರಾಂಚೈಸಿಯೊಂದು ಆಟಗಾರರಿಗೆ ಈ ಗೌರವ ನೀಡಿದೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಗೇಲ್ ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಫ್ರಾಂಚೈಸಿ ‘RCB ಹಾಲ್ ಆಫ್ ಫೇಮ್ಅನ್ನು ಪರಿಚಯಿಸುತ್ತಿದೆ: ಪಂದ್ಯ ವಿಜೇತರು, ಲೆಜೆಂಡ್‌ಗಳು, ಸೂಪರ್‌ಸ್ಟಾರ್‌ಗಳು, ಹೀರೋಗಳು – ನೀವು ಐಪಿಎಲ್ ಅನ್ನು ಇಂದಿನ ಸ್ಥಿತಿಗೆ ಕೊಂಡೊಯ್ಯಲು ಜವಾಬ್ದಾರರಾಗಿರುವವರು’ ಅಂತ ಇಬ್ಬರನ್ನು ಬಣ್ಣಿಸಿದೆ.

2011 ರಿಂದ 2017ರವರೆಗೆ ಆರ್‌ಸಿಬಿ ಪರ ಕ್ರಿಸ್‌ಗೇಲ್ ಆಡಿದ್ದರು. 2011 ರಿಂದ 2021 ರವರೆಗೆ ಎ.ಬಿ ಡಿವಿಲಿಯರ್ಸ್‌ ಆಡಿದ್ದರು.

Image

Leave a Reply

Your email address will not be published. Required fields are marked *