ಬೆಂಗಳೂರು: ಕನ್ನಡದ ‘ಬಿಗ್ ಬಾಸ್ ಸೀಸನ್ 9’ಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ವಿನ್ನರ್ ಪಟ್ಟವನ್ನ ರೂಪೇಶ್ ಶೆಟ್ಟಿ ಪಡೆದುಕೊಂಡಿದ್ದಾರೆ. ಸೆ.24ರಂದು ಶುರುವಾದ ಬಿಗ್ ಬಾಸ್ ಶೋ 100 ದಿನಗಳ ಕಾಲ ನಡೆದು, ಡಿ.31ಕ್ಕೆ ಮುಕ್ತಾಯಗೊಂಡಿದೆ.
ಈ ಬಾರಿ ಒಟ್ಟು 18 ಮಂದಿ ಮನೆಯೊಳಗೆ ಎಂಟ್ರಿ ನೀಡಿದ್ದರು. ಅದರಲ್ಲಿ ಅಂತಿಮವಾಗಿ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲೂ ಕಮಾಲ್ ಮಾಡಿದ್ದ ಅವರು, ಎರಡೂ ಸೀಸನ್‌ಗಳಿಂದ 142 ದಿನಗಳವರೆಗೆ ಶೋನಲ್ಲಿ ಇದ್ದರು.
