ಕೊಳ್ಳೇಗಾಲ: ಮೈಸೂರಿನ ಸರಸ್ವತಿಪುರಂನ ತೊಣಚಿಕೊಪ್ಪಲಿನಲ್ಲಿರುವ ಸಿಗ್ಮಾ ಆಸ್ಪತ್ರೆಯ ವತಿಯಿಂದ ಕೊಳ್ಳೇಗಾಲ ತಾಲೂಕಿನ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲೆಂದು ಸಿಗ್ಮಾ ಆಸ್ಪತ್ರೆಯ ನುರಿತ ಮೂತ್ರಪಿಂಡ ಮತ್ತು ಮೂತ್ರ ಶಾಸ್ತ್ರತಜ್ಞರ ವತಿಯಿಂದ ಇಂದಿನಿಂದ ಪ್ರತಿ ಗುರುವಾರ ಕೊಳ್ಳೇಗಾಲದ ಪ್ರಸಾದ್ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಡಾಕ್ಟರ್ ಕೆ.ಎಂ.ಮಾದಪ್ಪ ರವರ ತಂಡದಿಂದ ಸಂದರ್ಶನ ಮತ್ತು ಸಲಹೆಗೆ ಅನುವು ಮಾಡಲಾಗಿದೆ.

ಇನ್ನು ಈ ಸಂದರ್ಶನದಲ್ಲಿ ಮೂತ್ರಪಿಂಡ ಸಮಸ್ಯೆಗಳಾದ ಹೊಟ್ಟೆನೋವು, ಸೊಂಟ ನೋವು,ಬೆನ್ನು ನೋವು, ಮೂತ್ರದ ಸೋಂಕು,ಕಿಡ್ನಿಯಲ್ಲಿನ ಕಲ್ಲು, ಅಧಿಕ ರಕ್ತದೊತ್ತಡ, ಡಯಾಬಿಟಿಸ್,ಉರಿಮೂತ್ರ ಅಥವಾ ಮೂತ್ರದಲ್ಲಿ ರಕ್ತ, ದಿನನಿತ್ಯದ ಕೆಲಸಗಳನ್ನು ಮಾಡುವಲ್ಲಿ ವೈಫಲ್ಯತೆ ಖಿನ್ನತೆ, ಮುಖ ಹಾಗೂ ಕಾಲುಗಳ ಊತ,ಮೂತ್ರ ವಿಸರ್ಜಿಸಲು ಕಷ್ಟಕರವಾಗಿರುವುದು, ಪುರುಷರ ಬಂಜೆತನ, ಹೀಗೆ ಅನೇಕ ಸಮಸ್ಯೆಗಳಿಗೆ ಸಲಹೆಗಳನ್ನು ನೀಡಲಾಯಿತು.
ಇನ್ನು ಈ ಕುರಿತು ಸಿಗ್ಮಾ ಆಸ್ಪತ್ರೆಯ ಮೂತ್ರ ರೋಗ ಮತ್ತು ಮೂತ್ರಕೋಶ ಕಸಿ ಶಾಸ್ತ್ರತಜ್ಞರಾದ ಡಾಕ್ಟರ್ ಕೆ.ಎಂ. ಮಾದಪ್ಪ ರವರು ಮತ್ತು ಕೊಳ್ಳೇಗಾಲದ ಪ್ರಸಾದ್ ಡಯಾಗ್ನೋಸ್ಟಿಕ್ ಸೆಂಟರ್ ನ ರಿಡಿಯಾಲಿಜಿಸ್ಟ್ ಡಾಕ್ಟರ್ ನಾಗಪ್ರಸಾದ್ ರವರು ಮಾತನಾಡಿದರು.