ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು 15000 ಕೋಟಿ ವೆಚ್ಚದಲ್ಲಿ ವಿಶ್ವಕರ್ಮ ಯೋಜನೆ ಘೋಚಣೆ ಮಾಡಿರುವುದನ್ನು ಸ್ವಾಗತಿಸಿ ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಸದಸ್ಯರು ಸಿಹಿ ವಿತರಿಸಿ, ಸಂಸದ ಪ್ರತಾಪ್ ಸಿಂಹ ಅವರನ್ನು ಸನ್ಮಾನಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ,ವಿಶ್ವಕರ್ಮ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಜೀ ಅವರು 15000ಕೋಟಿ ರೂ ಯೋಜನೆಯನ್ನ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಹಿನ್ನಲೆಯಲ್ಲಿ ಮೈಸೂರಿನ ವಿಶ್ವಕರ್ಮ ಜನಾಂಗದ ಮುಖಂಡರು ಕೃತಜ್ಞತೆ ಸಲ್ಲಿಸಲು ಆಗಮಿಸಿದ್ದು ಇದನ್ನ ಸಮುದಾಯದ ಪರವಾಗಿ ಪ್ರಧಾನಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.
ಮೋದಿಜೀ ರವರು ವಿಶ್ವಕರ್ಮ ಜನಾಂಗ ಸೇರಿದಂತೆ ಸಣ್ಣ ಸಣ್ಣ ನೂರಾರು ಶ್ರಮಿಕ ಸಮಾಜದ ಪಾರಂಪರಿಕ ಕುಲಕಸುಬಗಳನ್ನ ಪ್ರೋತ್ಸಾಹಿಸಲು ಹಲಾವರು ಯೋಜನೆಗಳನ್ನ ತಂದಿದ್ದು ಅದನ್ನ ಸದುಪಯೋಗ ಪಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರಿಗೆ ಹೊಸ ಅವಕಾಶ ಕಲ್ಪಿಸುವ ವಿಶ್ವಕರ್ಮ ಯೋಜನೆಯನ್ನು 15,000 ಕೋಟಿ ರೂ ವೆಚ್ಚದಲ್ಲಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ವಿಶ್ವಕರ್ಮ ಜಯಂತಿ ದಿನವಾದ ಸೆಪ್ಟಂಬರ್ 17ರಂದು ಈ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿರುವುದು ಸ್ವಾಗತಾರ್ಹ ಎಂದು ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ ಹರ್ಷ ವ್ಯಕ್ತಪಡಿಸಿದರು.
ಸ್ವಾತಂತ್ರೋತ್ಸವದ ಭಾಷಣದಲ್ಲಿ ಮೂರ್ನಾಲ್ಕು ಬಾರಿ ವಿಶ್ವಕರ್ಮ ಸಮುದಾಯದ ಹೆಸರನ್ನು ಪ್ರಸ್ತಾಪಿಸಿ ಪ್ರಧಾನಿಗಳು ಮಾತನಾಡಿದ್ದಾರೆ.
ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆಗಳನ್ನು ಮತ್ತೊಮ್ಮೆ ಪರಿಚಯಿಸಿದಂತ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವಕರ್ಮ ಸಮುದಾಯದ ಪರವಾಗಿ ಹೃತ್ಪೂರ್ವಕವಾದ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಮೈಸೂರು ನಗರದಲ್ಲಿ ವಿಶ್ವಕರ್ಮರಿಗೆ ಸಮುದಾಯ ಭವನ ಇಲ್ಲ ಹಾಗಾಗಿ ಪ್ರತ್ಯೇಕ ವಿಶ್ವಕರ್ಮ ಸಮುದಾಯ ಭವನವನ್ನು ನಿರ್ಮಿಸಲು ಒಂದು ಎಕರೆ ಭೂಮಿಯನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಕೊಡುವಂತೆ ಸಂಘದ ಪದಾಧಿಕಾರಿಗಳು ಸಂಸದರಲ್ಲಿ ಮನವಿ ಮಾಡಿದರು.
ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಉಪಾಧ್ಯಕ್ಷ ಲೋಹಿತೇಶ್ ಆಚಾರ್, ಚೆಲುವ ರಾಜು ಎನ್,ಕಾರ್ಯದರ್ಶಿಗಳಾದ ಸಿ.ಟಿ ಆಚಾರ್ಯ, ಈಶ್ವರಾಚಾರ್, ಖಜಾಂಚಿ ಲೋಕೇಶ್ ಆಚಾರ್, ಮಹಿಳಾ ಮುಖಂಡರಾದ ನಾಗಮ್ಮ, ಎಂ ಎನ್ ಬಸವರಾಜ್,ಅರ್ಕೆಶ್ವರಚಾರ್, ಮಂಜು ಎಂ, ಸ್ವಾಮಿ, ರವಿ ಮತ್ತಿತರ ಮುಖಂಡರು ಸಂಸದ ಪ್ರತಾಪ್ ಸಿಂಹ ಅವರನ್ನು ಅಭಿನಂದಿಸಿದರು.