ತಾಯ್ತನದ ಜರ್ನಿ ಬಗ್ಗೆ ಅಮೂಲ್ಯ ಭಾವನಾತ್ಮಕ ಮಾತು

ಸಿನಿಮಾ: ಅವಳಿ ಮಕ್ಕಳ ಜನನದ ಖುಷಿಯಲ್ಲಿರುವ ನಟಿ ಅಮೂಲ್ಯ ತಾಯ್ತನದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ಮಕ್ಕಳಿಗೆ ಎರಡು ತಿಂಗಳು ತುಂಬಿದ ಸಂತಸದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ‘ತಾಯ್ತನದ ಸಂಭ್ರಮಕ್ಕೆ 2 ತಿಂಗಳು. ಖಂಡಿತವಾಗಿ ಇದು ನನ್ನ ಜೀವನದಲ್ಲಿ ಬಹು ನಿರೀಕ್ಷಿತ ಜರ್ನಿ ಅಂತಲೇ ಹೇಳಬಹುದು. ನಾನು ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಇದಕ್ಕಿಂತ ಹೆಚ್ಚು ಸಂತಸ ನನಗೆ ಬೇರೊಂದಿಲ್ಲ. ಗರ್ಭದಲ್ಲಿ ಪುಟ್ಟ ಕಂದಮ್ಮಗಳ ಕಾಲುಗಳ ಒದೆತೆಗಳು ಈಗ ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿದೆ’

‘ಈಗಾಗಲೇ ನಾನು ನನ್ನ ಬೇಬಿ ಬಂಪ್‌ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಪ್ರತಿಯೊಬ್ಬ ತಾಯಿಯೂ ಜಗತ್ತಿಗೆ ತನ್ನ ಕೆಚ್ಚೆದೆಯ ಮುಖವನ್ನು ತೋರಿಸುತ್ತಾಳೆ. ಆದರೆ, ಈ ಗರ್ಭಾವಸ್ಥೆಯ ಪಯಣದಲ್ಲಿನ ಗುಲಾಬಿಗಳು ಮತ್ತು ಮುಳ್ಳುಗಳು ತಾಯಿಗೆ ಮಾತ್ರ ತಿಳಿದಿದೆ ಎಂಬುದನ್ನು ನಾನು ಹೇಳಲೇಬೇಕು’.

‘ಎಷ್ಟೆಲ್ಲಾ ಕಷ್ಟವಾದರೂ, ಕೊನೆಯಲ್ಲಿ ನಾನು ನನ್ನ ಮಕ್ಕಳ ಪುಟ್ಟ ಪುಟ್ಟ ಪಾದಗಳನ್ನು ನೋಡಿದಾಗ ಅಥವಾ ಅವರ ಕೈಗಳನ್ನು ಹಿಡಿದಾಗ, ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ ಎಂಬುದು ನನಗೆ ಗೊತ್ತಾಗುತ್ತದೆ’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *