ಬೆಂಗಳೂರಿನಲ್ಲಿ ಎಐ ಆಧಾರಿತ ಫರ್ಟಿಲಿಟಿ ಸೆಂಟರ್ ಆರಂಭದೊಂದಿಗೆ ಮಹಿಳೆಯರ ಆರೋಗ್ಯದಲ್ಲಿ ಕ್ರಾಂತಿ ಉಂಟಾಗಲಿದೆ

ಬೆಂಗಳೂರು: ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಅತ್ಯಾಧುನಿಕವಾದ ಕೇಂದ್ರವನ್ನು ಬೆಂಗಳೂರಿನಲ್ಲಿ 14, ಅಕ್ಟೋಬರ್ 2023ರಂದು ಆರಂಭಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಈ ಕೇಂದ್ರವು ಫಲವಂತಿಕೆ ಆರೈಕೆಯಲ್ಲಿ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

ಕೇಂದ್ರವನ್ನು ಮುಖ್ಯ ಅತಿಥಿಗಳಾದ ಶ್ರೀ ರಿಜ್ವಾನ್ ಅರ್ಷಾದ್, ವಿಧಾನಸಭೆ ಸದಸ್ಯರು, ಶಿವಾಜಿನಗರ, ಕರ್ನಾಟಕ ಅವರು ಶ್ರೀ ನಾವೀದ್ ಅಹಮದ್ ಖಾನ್, ಕಾರ್ಯದರ್ಶಿ, ಮುಸ್ಲಿಂ ಆರ್ಫನೇಜ್, ಶ್ರೀ ರಾಘಬ್ ಪ್ರಸಾದ್ ಪಾಂಡಾ, ಸಹ-ಸ್ಥಾಪಕರು ಮತ್ತು ಸಿಇಒ, ಸಂತಾನ ಮತ್ತು ಡಾ.ಸತೀಶ್ ಪ್ರಸಾದ್ ರಾಥ್, ಸ್ಥಾಪಕರು, ಸಂತಾನ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಅತ್ಯಾಧುನಿಕವಾದ ಕೇಂದ್ರವನ್ನು ಬೆಂಗಳೂರಿನಲ್ಲಿ 14, ಅಕ್ಟೋಬರ್ 2023ರಂದು ಆರಂಭಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಈ ಕೇಂದ್ರವು ಫಲವಂತಿಕೆ ಆರೈಕೆಯಲ್ಲಿ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

ಶ್ರೀ ರಾಘಬ್ ಪ್ರಸಾದ್ ಪಾಂಡಾ, ಸಹ-ಸಂಸ್ಥಾಪಕರು ಮತ್ತು ಸಿಇಒ, ಸಂತಾನ ಅವರು ಹೇಳಿದರು, `ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು ಬೆಂಗಳೂರು ಮತ್ತು ಅದರ ಆಚೆಗೆ ಮಹಿಳೆಯರ ಆರೋಗ್ಯ ಮತ್ತು ಫಲವಂತಿಕೆ ಆರೈಕೆಯಲ್ಲಿ ಪರಿವರ್ತನೆಯ ಪ್ರಯಾಣವನ್ನು ಆರಂಭಿಸಲು ಉತ್ಸುಕವಾಗಿದೆ. ನಾವು ಈ ತಿಂಗಳ 14ರಂದು ನಡೆಯುವ ನವೀನ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಎಲ್ಲರನ್ನೂ ಆಹ್ವಾನಿಸುತ್ತೇವೆ. ಒಟ್ಟಾಗಿ ನಾವೆಲ್ಲರೂ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ದಂಪತಿ ಕುಟುಂಬವನ್ನು ಪ್ರಾರಂಭಿಸುವ ಕನಸನ್ನು ನನಸಾಗಿಸಬಹುದು’.

ಕುಟುಂಬವನ್ನು ಆರಂಭವಿಸುವ ದಂಪತಿಯ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂಬತ್ತು ವರ್ಷಗಳ ಅನುಭವ ಹೊಂದಿರುವ `ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು, ಈ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರು ಗಳಿಸಿಕೊಂಡಿದೆ. ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಫಲವಂತಿಕ ತಜ್ಞರು, ನುರಿತ ದಾದಿಯರು ಮತ್ತು ಸಹಾನುಭೂತಿಯನ್ನು ಹೊಂದಿರುವ ಬೆಂಬಲ ಸಿಬ್ಬಂದಿಯ ತಂಡವು ಪ್ರತಿ ರೋಗಿಗೂ ವೈಯಕ್ತಿಕ ಆರೈಕೆ ಮತ್ತು ಕಾಳಜಿ ನೀಡಲು ಬದ್ಧವಾಗಿದೆ.

Leave a Reply

Your email address will not be published. Required fields are marked *