ತಮಿಳುನಾಡು: ಗುರುವಾರದಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣಕ್ಕೂ ಮುನ್ನ ಅಧಿವೇಶನದಲ್ಲಿ ಭಾಗಿಯಾಗಿದ್ದ ಎಲ್ಲಾ ಪಕ್ಷಗಳ ಸದಸ್ಯರು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅಗಲಿದ ಇತರ ಗಣ್ಯರಿಗೆ ಗೌರವ ನಮನ ಸಲ್ಲಿಸಿದರು.
ಕನ್ನಡ ನಟರೊಬ್ಬರ ಅಗಲಿಕೆಗೆ ನೆರೆ ರಾಜ್ಯದ ವಿಧಾನಸಭೆಯಲ್ಲಿ ಅಧಿಕೃತ ಗೌರವ ಸಲ್ಲಿಸಲಾಗಿದೆ. ಅಧಿವೇಶನದ ಮೊದಲ ದಿನವೇ ಪುನೀತ್ ಬಗ್ಗೆ ಮಾತನಾಡಲಾಗಿದ್ದು, ಆ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಪುನೀತ್ ಕೊನೆಯುಸಿರೆಳೆದ ದಿನವೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪುನೀತ್‌ರ ಭಾವಚಿತ್ರವನ್ನು ಟ್ವೀಟಿಸಿ ಸಂತಾಪ ಸೂಚಿಸಿದ್ದರು. ಕಳೆದ ವರ್ಷದ ಅ.29ರಂದು ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನಗಲಿದ್ದರು.