ಅಯೋಧ್ಯೆ ರಾಮಮಂದಿರ ಉದ್ಘಾಟನೆ: ರಾಮ ಲಲ್ಲಾ ದರ್ಶನ ಪಡೆಯಲು ಮುಗಿಬಿದ್ದ ಭಕ್ತಗಣ

ಅಯೋಧ್ಯೆ: ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಂಡ ಕ್ಷಣದಿಂದಲೇ ಲಕ್ಷಾಂತರ ಭಕ್ತರು ಪ್ರಭುವಿನ ದರ್ಶನ ಪಡೆಯಲು ಮುನ್ನುಗ್ಗುತ್ತಿದ್ದಾರೆ. ಹಾಗಾಗಿ ಇಡೀ ಅಯೋಧ್ಯೆ ಭಕ್ತ ಸಾಗರದಿಂದ ತುಂಬಿಹೋಗಿದೆ.

ಈ ಕ್ಷಣದವರೆಗೆ 3 ಲಕ್ಷಕ್ಕೂ ಹೆಚ್ಚು‌ ಭಕ್ತರು ರಾಮನಲ್ಲಾನ ದರ್ಶನ ಪಡೆದಿದ್ದರೆ, ರಾಮ ಮಂದಿರದ ಹೊರಭಾಗದಲ್ಲಿ ಲಲ್ಲಾನನ್ನು ಕಣ್ತುಂಬಿಕೊಳ್ಳಲು ಇನ್ನು ಲಕ್ಷಾಂತರ ಮಂದಿ ಕಾಯುತ್ತಲೇ ಇದ್ದಾರೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಎಲ್ಲಿ ನೋಡಿದರಲ್ಲಿ ರಾಮಾ, ರಾಮಾ, ಲಲ್ಲಾ ಶ್ರೀರಾಮ ಪ್ರಭುವೇ ಎಂಬ ಜಯ ಘೋಶಗಳು ನಿರಂತರವಾಗಿ ಮೊಳಗುತ್ತಲೇ ಇದೆ.

ನೆನ್ನೆ ಪ್ರಧಾನಿ ನರೇಂದ್ರ ಮೋದಿಯವರು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನ ಕಾರ್ಯ ನೆರವೇರಿಸಿದ್ದು, ಗಣ್ಯಾತಿ ಗಣ್ಯರು ಆಹ್ವಾನದ ಮೇರೆಗೆ ಬಂದಿದ್ದರಿಂದ ಇಡೀ ದಿನ ಭಕ್ತರಿಗೆ ರಾಮ ದರ್ಶನಕ್ಕೆ ಅವಕಾಶವಿರಲಿಲ್ಲ. ಇಂದು ಪ್ರಭುವಿನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಒಮ್ಮೆಲೇ ಭಕ್ತರು ಮಂದಿರದೊಳಗೆ ಹೋಗಲು ಮುಗಿಬಿದ್ದರು.

ಒಮ್ಮೆಲೇ ಭಕ್ತರು ಮಂದಿರದ ಕಡೆ ನುಗ್ಗಿದ್ದರಿಂದ ಜನಸಂದಣಿಯಲ್ಲಿ ಸಿಲುಕಿ ಒಂದಿಬ್ಬರು ಮಹಿಳೆಯರು ಅಸ್ವಸ್ಥ ಗೊಂಡ ಪ್ರಕರಣವು ನಡೆದಿದ್ದು ಅವರನ್ನು ಸುರಕ್ಷಿತ ಸ್ಥಳಕ್ಕೆ ಪೊಲಿಸಲು ರವಾನುನಿಸಿ ಆರೈಕೆ ಮಾಡಿದ್ದಾರೆ.

ಸಂಜೆ ವೇಳೆಗೆ ಪೊಲೀಸರು ಅಲ್ಲಲ್ಲೇ ಬ್ಯಾರಿಕೇಡ್ ಗಳನ್ನು ಹಾಕಿ ಒಬ್ಬರು ಇಬ್ಬರಂತೆ ಸರತಿ ಸಾಲುಗಳನ್ನು ಮಾಡಿ ಮಂದಿರದ ಒಳಗೆ ಬಿಟ್ಟು ರಾಮನ ದರ್ಶನ ಪಡೆದು ಮಂದಿರದ ಬೇರೆ ಕಡೆಯಿಂದ ಹೊರಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಭಕ್ತರು ಸಾವಾಕಾಶದಿಂದ ದೇವನ ದರ್ಶನ ಪಡೆಯುತ್ತಿದ್ದಾರೆ.

ಐದು ಶತಕಗಳ ಕನಸು ಇದೀಗ ಈಡೇರುವುದರಿಂದ ಇಡೀ ದೇಶಾದ್ಯಂತ ಭಕ್ತರು ಅಯೋಧ್ಯೆಗೆ ಆಗಮಿಸುತ್ತಲೆ ಇದ್ದಾರೆ. ಹಾಗಾಗಿ ಅಲ್ಲಿನ ಪ್ರತಿಯೊಂದು ಹೋಟೆಲ್ ಗಳು, ಚೌಲ್ಟ್ರಿಗಳು ಎಲ್ಲವೂ ಬುಕ್ ಆಗಿವೆ. ಕೆಲವು ಹೋಟೆಲುಗಳಲ್ಲಿ ಕೊಠಡಿ ಬೆಲೆ ಒಂದು ಲಕ್ಷದವರೆಗೂ ಮೀರಿದೆ ಆದರೂ ಭಕ್ತರು ಅಯೋಧ್ಯೆಯಿಂದ ಕದಲಲು ಮನಸೇ ಮಾಡುತ್ತಿಲ್ಲ ಅಲ್ಲೇ ಇರಲು ಬಯಸುತ್ತಿದ್ದಾರೆ.

ಅಯೋಧ್ಯೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭಕ್ತರಲ್ಲಿ ಮನವಿ ಮಾಡುತ್ತಲೇ ಇದ್ದಾರೆ ಒಟ್ಟಿಗೆ ನುಗ್ಗಬೇಡಿ ಒಬ್ಬರು ಇಬ್ಬರು ಬಂದು ದರ್ಶನ ಪಡೆದು ಬೇರೆಯವರಿಗೆ ಅವಕಾಶ ಮಾಡಿಕೊಡಿ ದರ್ಶನ ಈಗಷ್ಟೇ ಪ್ರಾರಂಭವಾಗಿದೆ ಸಾವಧಾನವಾಗಿ ಇರಿ ಎಂದು ಮನವಿ ಮಾಡುತ್ತಲೇ ಇದ್ದಾರೆ.

ರಾಮಲಲ್ಲ ದರ್ಶನ ಪಡೆಯಲು ಮುಗಿ ಬೀಳುವವರ ಸಂಖ್ಯೆ ಹೆಚ್ಚುತ್ತಲೆ ಇದೆ ಇದು ಸದ್ಯಕ್ಕಂತೂ ನಿಲ್ಲುವುದಿಲ್ಲ ಇಷ್ಟೊಂದು ಭಕ್ತರ ಸಂಖ್ಯೆಯನ್ನು ನಾವು ಎಂದಿಗೂ ಎಲ್ಲೂ ನೋಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಉದ್ಘರಿಸುತ್ತಿದ್ದಾರೆ. ಇನ್ನು ಕರ್ನಾಟಕದಿಂದಲೂ ಸಾಕಷ್ಟು ಭಕ್ತರು ಅಯೋಧ್ಯೆಗೆ ಹೋಗಲು ಕಾತುರದಿಂದ ಕಾಯುತ್ತಿದ್ದಾರೆ ಹಾಗಾಗಿ ನೈರುತ್ಯ ರೈಲ್ವೆ ಭಕ್ತರ ಅನುಕೂಲಕ್ಕಾಗಿಯೇ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ.

Leave a Reply

Your email address will not be published. Required fields are marked *