ತಮಿಳುನಾಡು: ಸ್ವಾಮೀಜಿ ವೇಷದಲ್ಲಿದ್ದ ಬೆಂಗಳೂರಿನ ಆ್ಯಸಿಡ್ ದಾಳಿ ಆರೋಪಿ ನಾಗೇಶ್(Nagesh) ನನ್ನ ಭಕ್ತರ ವೇಷದಲ್ಲಿ ಹೋಗಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದು 16 ದಿನಗಳ ಬಳಿಕ ನಾಗೇಶ್ನನ್ನು ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮದಲ್ಲಿ ಬಂಧಿಸಿದ್ದಾರೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಏಪ್ರಿಲ್ 28ರಂದು ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿ ನಾಗೇಶ್ ದಾಳಿ ನಂತರ ತಲೆಮರೆಸಿಕೊಂಡಿದ್ದ.