ಬೆಂಗಳೂರು: ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಸಚಿವ ರಾಮಲಿಂಗಾರೆಡ್ಡಿ ಬಸ್ ನಲ್ಲಿ ಪ್ರಯಾಣ ಮಾಡಿ ಮಹಿಳೆಯರಿಗೆ ಟಿಕೆಟ್ ವಿತರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಹಿಳೆಯರನ್ನು ಸಿದ್ದು, ಡಿಕೆಶಿ ಮಾತನಾಡಿಸಿ ಬಸ್ ಪ್ರಯಾಣ ಉಚಿತವಾಗಿದ್ದರಿಂದ ಅನುಕೂಲವಾಗಿದೆಯೆ ಎಂದು ವಿಚಾರಿಸಿದರು. ಈ ವೇಳೆ ಪ್ರಯಾಣಿಕರು ಒಬ್ಬೊಬ್ಬರು ತಮಗಾಗುತ್ತಿದ್ದ ಕಷ್ಟಗಳನ್ನು ತೋಡಿಕೊಂಡು ಈಗ ಹಣ ಉಳಿಯುವ ಕುರಿತು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯವರು ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ವಿಧಾನಸೌಧದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಬಸ್ ಗಳಿಗೂ ಚಾಲನೆ ನೀಡಿದರು. ನಂತರ ವಿಧಾನಸೌಧಕ್ಕೆ ಬಸ್ ನಲ್ಲಿಯೇ ಹಿಂದಿರುಗಿದರು.