ನವದೆಹಲಿ: ಕಾಶ್ಮೀರ್ ಪ್ರೀಮಿಯರ್ ಲೀಗ್(ಕೆ.ಪಿ.ಎಲ್)ನಲ್ಲಿ ಆಡದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನನ್ನ ಮೇಲೆ ಒತ್ತಡ ಹೇರುತ್ತಿದೆ, ಬೆದರಿಕೆ ಹಾಕುತ್ತಿದೆಯಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟ್ ಆಟಗಾರ ಹರ್ಷಲ್ ಗಿಬ್ಸ್ ಆರೋಪ ಮಾಡಿದ್ದಾರೆ.
ಪಾಕಿಸ್ತಾನದೊಂದಿಗಿನ ಕೆಟ್ಟ ರಾಜಕೀಯ ಸಮೀಕರಣಗಳನ್ನು ಉಲ್ಲೇಖಿಸಿ ಬಿಸಿಸಿಐ ನನ್ನನ್ನು ಕೆಪಿಎಲ್ ನಲ್ಲಿ ಆಡಲು ಬಿಡುತ್ತಿಲ್ಲ ಎಂದಿರುವ ಹರ್ಷಲ್ ಗಿಬ್ಸ್ ಕ್ರಿಕೆಟ್ ಗೆ ಸಂಬಂಧಿತ ಯಾವ ಕೆಲ್ಸಕ್ಕೂ ನನಗೆ ಅವಕಾಶ ನೀಡುವುದಿಲ್ಲವೆಂದು ಬಿಸಿಸಿಐ ಹೇಳಿದೆ ಎಂದು ಹೇಳಿದ್ದಾರೆ.