ಮೈಸೂರು: ಸಮಾಜಿಕ ಮಾಧ್ಯಮಗಳು ಎಲ್ಲೆಡೆ ಪ್ರಖ್ಯಾತಿ ಹೊಂದಿದ್ದು, ಮನುಷ್ಯನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ ಎಂದು ಕ್ರಿಯೇಟಿವ್ ಕಮ್ಯೂನಿಟಿ ಕಂಪನಿಯ ಸ್ಥಾಪಕ ಶೇಖ್ ನಿಹಾಲ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಕ್ರಿಯೇಟಿವ್ ಕಮ್ಯೂನಿಟಿ ಕಂಪನಿಯ ಸಹಯೋಗದೊಂದಿಗೆ “ಸಾಮಾಜಿಕ ಮಾಧ್ಯಮದಿಂದ ವೃತ್ತಿಜೀವನದ ಸಂಪಾದನೆ ಹೇಗೆ? ” ಎಂಬ ವಿಷಯದ ಬಗ್ಗೆ ಕಾರ್ಯಗಾರ ನಡೆಯಿತು.
ಸಮಾಜಿಕ ಮಾಧ್ಯಮಗಳು ಎಲ್ಲೆಡೆ ಪ್ರಖ್ಯಾತಿ ಹೊಂದಿದ್ದು, ಇವುಗಳನ್ನು ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸದೆ, ಇವುಗಳಿಂದ ಹೇಗೆ ವೃತ್ತಿಯನ್ನು ಸಂಪಾದಿಸಬಹುದು ಎಂಬುದು ಇಂದಿನ ಯುವ ಸಮುದಾಯಕ್ಕಿರುವ ಸವಾಲು ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳು ಹಲವಾರು ವೃತ್ತಿ ಜೀವನದ ಅವಕಾಶಗಳನ್ನು ಎಲ್ಲರ ಮುಂದಿಟ್ಟಿದೆ. ಈ ಮಾಧ್ಯಮಗಳನ್ನು ಅರ್ಥಪೂರ್ಣವಾಗಿ ಹಾಗೂ ರಚನಾತ್ಮಕವಾಗಿ ಹೇಗೆ ಮಾಧ್ಯಮ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ವಿವರಿಸಿದರು.
ಕಾರ್ಯಗಾರದಲ್ಲಿ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ. ಕೆ. ಪುಟ್ಟಸ್ವಾಮಿ, ಪ್ರೊ ಎಂ. ಎಸ್. ಸಪ್ನ, ಡಾ. ಗೌತಮ್ ದೇವನೂರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.