ಬೆಂಗಳೂರು, ಅಕ್ಟೋಬರ್ 10, 2025: ತೀವ್ರ ಹೃದಯದ ಕಾಯಿಲೆಯಿಂದಬಳಲುತ್ತಿದ್ದ 70 ವರ್ಷ ವಯಸ್ಸಿನ ಗೃಹಿಣಿಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಭಾರತದ ಮೊದಲ ಮೇಕ್ ಇನ್ ಇಂಡಿಯಾ ಮೈಟರಲ್ ಕ್ಲಿಪ್ ಅನ್ನು ಬಳಸಿಯಶಸ್ವಿಯಾಗಿ ಚಿಕಿತ್ಸೆಯನ್ನು ನೀಡಲಾಯಿತು.
ಕಳೆದ ಎರಡು ವರ್ಷಗಳಿಂದ ತೀವ್ರ ಉಸಿರಾಟದ ತೊಂದರೆ, ಪಾದಗಳು ಊದಿಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥತೆಗಳಿಂದಾಗಿ ಬಳಲುತ್ತಿದ್ದ 70 ವರ್ಷ ವಯಸ್ಸಿನ ಗೃಹಿಣಿಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಭಾರತದ ಮೊದಲ ಮೇಕ್ ಇನ ಇಂಡಿಯಾ ಮೈಟರಲ್ ಕ್ಲಿಪ್ ಸಾಧನದ (ಮೈಕ್ಲಿಪ್) ಮೂಲಕ ಯಶಸ್ವಿಯಾಗಿಚಿಕಿತ್ಸೆಯನ್ನು ನೀಡಲಾಗಿದೆ.
ಈ ಪ್ರಕರಣದ ಕುರಿತು ಮಾತನಾಡಿದ ಡಾ. ಕಿಶೋರ್ ಕೆ. ಎಸ್. ಅವರು ಹೀಗೆ ಹೇಳಿದರು “ತೀವ್ರವಾದ ಮೈಟರಲ್ ರಿಗರ್ಗಿಟೇಶನ್ ಹೊಂದಿರುವ ರೋಗಿಗಳು ಅವರವಯಸ್ಸು, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ದೌರ್ಬಲ್ಯ ಅಥವಾಸಹ-ಅಸ್ತಿತ್ವದಲ್ಲಿರುವ ಮೂತ್ರಪಿಂಡ, ಶ್ವಾಸಕೋಶ ಮತ್ತು ಯಕೃತ್ತಿನ ಸಮಸ್ಯೆಗಳಿಂದಾಗಿ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಪಾಯವನ್ನು ಹೊಂದಿರುತ್ತಾರೆ. ಚಿಕಿತ್ಸೆಯನ್ನು ನೀಡದಿದ್ದರೆ, MR ವಿನಾಶಕಾರಿ ಪರಿಣಾಮಗಳನ್ನು ಬೀರುತ್ತದೆ – ಶೇ. 50% ಕ್ಕಿಂತ ಹೆಚ್ಚು ಜನರು ಬದುಕುಳಿಯದಿರಬಹುದು ಮತ್ತು ಒಂದು ವರ್ಷದ ಮರಣವು ಶೇ. 57% ರವರೆಗೆ ಇರಬಹುದು. ಅಂತಹ ರೋಗಿಗಳಿಗೆ, ಈ ಶಸ್ತ್ರಚಿಕಿತ್ಸೆ ಇಲ್ಲದ ಮೈಕ್ಲಿಪ್ ವಿಧಾನವು ಜೀವ ಉಳಿಸುವ ಪರ್ಯಾಯ ಮಾರ್ಗವನ್ನು ನೀಡುತ್ತದೆ.”