ದೇಶ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಕರ್ನಾಟಕದ ಯೋಧನಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ

ನವದೆಹಲಿ: ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದ ಹುತಾತ್ಮ ವೀರ ಯೋಧ, ರಾಷ್ಟ್ರೀಯ ರೈಫಲ್ಸ್ 44ನೇ ಬೆಟಾಲಿಯನ್ ನ ಹವಾಲ್ದಾರ್ ಕಾಶೀರಾಯ್ ಬಮ್ಮನಳ್ಳಿ ಅವರಿಗೆ ನಿನ್ನೆ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಶೌರ್ಯಚಕ್ರ (ಮರಣೋತ್ತರ ShauryaChakra ) ಪ್ರಶಸ್ತಿ ನೀಡಿ ಗೌರವಿಸಿದರು. ಹವಾಲ್ದಾರ್ ಕಾಶೀರಾಯ್ ಅವರ ತಾಯಿ ಮತ್ತು ಶ್ರೀಮತಿಯವರು ಪ್ರಶಸ್ತಿ ಸ್ವೀಕರಿಸಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಶಂಕರಪ್ಪ ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಅಪ್ಪಿದ್ದರು. 44ನೇ ಬೆಟಾಲಿಯನ್ ರಾಷ್ಟ್ರೀಯ ರೈಫಲ್ಸ್ ನ ಕಾರ್ಪ್ಸ್ ಆಫ್ ಎಂಜಿನಿಯರ್ಸ್ ನ ಹವಾಲ್ದಾರ್ ಆಗಿ ಕಾಶಿರಾಯ ಬಮ್ಮನಹಳ್ಳಿ ಕಾರ್ಯ ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *