ಸ್ಯಾಂಡಲ್ ವುಡ್’ಗೆ ಮತ್ತೊಂದು ಆಘಾತ: KGF ನಟ ಮೋಹನ್ ಜುನೇಜಾ ವಿಧಿವಶ

ಸಿನಿಮಾ: ಸ್ಯಾಂಡಲ್ ವುಡ್’ಗೆ ಮತ್ತೊಂದು ಆಘಾತ ಎದುರಾಗಿದ್ದು ಅನಾರೋಗ್ಯದಿಂದ ಹಿರಿಯ ಹಾಸ್ಯನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ.

ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಶನಿವಾರ (ಮೇ 7ರಂದು) ವಿಧಿವಶರಾಗಿದ್ದಾರೆ.

ಅಲ್ಪಪಾತ್ರವಾದರೂ ಪ್ರಾಮುಖ್ಯತೆ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ‘ಕೆಜಿಎಫ್’, ‘ಕೆಜಿಎಫ್ 2’, ‘ನವಗ್ರಹ’, ‘ಗಣೇಶನ ಗಲಾಟೆ’ ‘ಜೋಗಿ’ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *