ಸಿನಿಮಾ: ಈಗಾಗಲೆ ಬಾಕ್ಸ್ ಆಫೀಸ್ನಲ್ಲಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಕನ್ನಡದ ಹೆಮ್ಮೆಯ ಚಿತ್ರ ‘ಕೆಜಿಎಫ್ 2’ ಇದೀಗ OTTಯಲ್ಲಿ ರಿಲೀಸ್ ಆಗಿದೆ.
ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ‘ಕೆಜಿಎಫ್ 2′ ಬಿಡುಗಡೆಯಾಗಿದೆ. ಆದರೆ ನೀವು ಅಮೇಜಾನ್ ಪ್ರೈಮ್ ವಿಡಿಯೋ ಚಂದಾದಾರರಾಗಿದ್ದರೂ ಸದ್ಯಕ್ಕೆ ಈ ಸಿನಿಮಾವನ್ನು ವೀಕ್ಷಿಸುವುದಕ್ಕಾಗುವುದಿವಿಲ್ಲ. ಕೆಜಿಎಫ್ ಚಾಪ್ಟರ್ 2 ನೋಡಬೇಕೆಂದ್ರೆ ನೀವು ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಚಿತ್ರವನ್ನು ನೀವು ಬಾಡಿಗೆಗೆ ಪಡೆಯಬಹುದು. ಇದಕ್ಕಾಗಿ 199 ರೂ ಪಾವತಿಸಬೇಕು. ಹಾಗಿದ್ದರೆ ಮಾತ್ರ ನೀವು ಸಿನಿಮಾ ವೀಕ್ಷಿಸಬಹುದು.
ಅಲ್ಲದೆ ನೀವು 199 ರೂ ಪಾವತಿಸಿ ಸಿನಿಮಾ ಬಾಡಿಗೆಗೆ ಪಡೆದು ಚಿತ್ರ ವೀಕ್ಷಣೆ ಪ್ರಾರಂಭಿಸಿದರೆ 48 ಗಂಟೆಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಒಂದೊಮ್ಮೆ ನೀವು ಸಿನಿಮಾ ಬಾಡಿಗೆ ಪಡೆದು ವೀಕ್ಷಿಸದೆ ಇದ್ದರೆ ಹಣ ಪಾವತಿಸಿದ ಸಮಯದಿಂದ 30 ದಿನಗಳ ಕಾಲ ಇದರ ವ್ಯಾಲಿಡಿಟಿ ಇರಲಿದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ಚಿತ್ರ ನೋಡಬಹುದು.