ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು ಎರಡೂವರೆ ಕೋಟಿ ರೂಪಾಯಿಗಳ ಕಾಣಿಕೆ ಸಂಗ್ರಹವಾಗುವುದರೊಂದಿಗೆ ಮಾದಪ್ಪ ಕೋಟಿ ಒಡೆಯನಾಗಿಯೇ ಮುಂದುವರೆದಿದ್ದಾನೆ.
ದಿನಾಂಕ 13/5/2022ರಂದು ಬೆಳ್ಳಿಗೆಯಿಂದ ರಾತ್ರಿ 11.45ರ ತನಕ ಎಣಿಕೆ ಕಾರ್ಯ ನಡೆಸಲಾಯಿತ್ತು. ದಿನಾಂಕ 08/4/2022 ರಿಂದ 12/5/2022ರ 34 ದಿನಗಳ ಅವಧಿಯ ಹುಂಡಿಯಲ್ಲಿ 2,57,25,859 ರೂ.(ಎರಡು ಕೋಟಿ 57 ಲಕ್ಷದ 25 ಸಾವಿರದ 859 ರೂಪಾಯಿಗಳು), 127 ಗ್ರಾಂ ಚಿನ್ನ, 3,447 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಸ್ವಾಮಿ ಸನ್ನಿಧಾನಕ್ಕೆ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯಗಳಿಂದಲ್ಲೂ ಭಕ್ತರು ಬಂದು ದರ್ಶನವನ್ನು ಪಡೆಯುತ್ತಿದ್ದಾರೆ. ದಿನನಿತ್ಯದ ವಿವಿಧ ಸೇವೆಗಳನ್ನು ಹೊರತುಪಡಿಸಿ ಹುಂಡಿಯಲ್ಲೇ 34 ದಿನಗಳಲ್ಲಿ ಬಾರಿ ಮೊತ್ತದ ಹಣವನ್ನು ಮಾದಪ್ಪ ಹುಂಡಿಗೆ ಭಕ್ತರು ಸಮರ್ಪಿಸಿದ್ದಾರೆ.