ಮೈಸೂರು: ನಗರದ ಇಟ್ಟಿಗೆಗೂಡಿನಲ್ಲಿರುವ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 98ನೇ ವರ್ಷದ ಕರಗ ಮಹೋತ್ಸವ (Mysuru Karaga) ಶನವಾರ ರಾತ್ರಿ ಮಳೆಯ ನಡುವೆಯೂ ವಿಜೃಂಭಣೆಯಿಂದ ನಡೆಯಿತು.
ವಿಡಿಯೋ ನೋಡಿ 👇🏻
ಇಟ್ಟಿಗೆಗೂಡಿನ ದೇವಸ್ಥಾನದಿಂದ ಹೊರಟ ಕರಗ ಉತ್ಸವ(Mysuru Karaga) ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕರಗದ ಹಿನ್ನೆಲೆಯಲ್ಲಿ ಇಟ್ಟಿಗೆಗೂಡು ಬಡಾವಣೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇಟ್ಟಿಗೆಗೂಡಿನ ಜನತೆ ಕಳೆದ 98 ವರ್ಷಗಳಿಂದ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ಕರಗ ಮಹೋತ್ಸವ ನಡೆಸುತ್ತಿದ್ದು, ನಗರದಲ್ಲಿ ವಿಶೇಷ ಆಚರಣೆಯಾಗಿ ಬೆಳೆದುಬಂದಿದೆ.