ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅಹಮದಾಬಾದ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೀರಾಬೆನ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಹೀರಾಬೆನ್ ಅವರಿಗೆ 100 ವರ್ಷವಾಗಿತ್ತು. ಅವರು ಮುಂಜಾನೆ 3:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ ಗುಜರಾತ್ ತಲುಪಿದ ಪ್ರಧಾನಿ ಮೊದಲು ಅವರ ರೇಸನ್ ನಿವಾಸದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಗಾಂಧಿನಗರದಲ್ಲಿ ಹೀರಾಬೆನ್ ಮೋದಿಯವರ ಅಂತಿಮ ಯಾತ್ರೆ ಆರಂಭವಾದಾಗ ತಾಯಿಯ ಪಾರ್ಥಿವ ಶರೀರಕ್ಕೆ ನರೇಂದ್ರ ಮೋದಿ ಹೆಗಲು ಕೊಟ್ಟರು.
ತಾಯಿ ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ಮೋದಿ ನರೆವೇರಿಸಿದರು. ಗುಜರಾತ್ ರಾಜಧಾನಿ ಗಾಂಧಿನಗರದ ಸೆಕ್ಟರ್ 30 ರಲ್ಲಿ ಮುಕ್ತಿಧಾಮ್ ಸ್ಮಶಾನದಲ್ಲಿ ಹೀರಾಬೆನ್ ಮೋದಿಯವರ ಅಂತ್ಯಕ್ರಿಯೆಗಳು ನಡೆದವು. ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಮೋದಿ ಅವರು ತಮ್ಮ ಕರ್ತವ್ಯಕ್ಕೆ ಹಾಜರಾದರು.