ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಬಿಡುಗಡೆ ಆಗಿದೆ.
ಇಂದು ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಗಂಧದ ಗುಡಿ ಸಾಕ್ಷ್ಯಚಿತ್ರ ಪುನೀತ್ ಅವರ ‘ಪಿಆರ್ಕೆ ಆಡಿಯೋ’ (PRK Audio) ಯೂಟ್ಯೂಬ್ ಚಾನೆಲ್ ನಲ್ಲಿ ಟೈಟಲ್ ಟೀಸರ್ ಬಿಡುಗಡೆಯಾಗಿದೆ.
ಟೀಸರ ನ ಕೊನೆಯ ಹಂತದಲ್ಲಿ ಬರುವ ರಾಜಕುಮಾರ್ ಅವರ ಸಾಲನ್ನು ಕೇಳಿ ಯಾವುದೇ ಪ್ರೇಕ್ಷಕರ ಮೈ ನವಿರೇಳುವುದು ಖಂಡಿತ. ಕನ್ನಡ ನಾಡನ್ನು, ಮತ್ತು ಅದರ ಸೊಬಗನ್ನು ತೋರಿಸುವ ಈ ಚಿತ್ರ ಎಲ್ಲಾ ಕರ್ನಾಟಕ ನಾಡು ನುಡಿ ನೆಲದ ಮೇಲಿರುವ ಸ್ವಾಭಿಮಾನವನ್ನು ಬಡಿದೆಬ್ಬಿಸಲು ಒಂದು ಪ್ರಯತ್ನ ಆಗುವುದು ಎಂದು ಅಪ್ಪು ಅವರ ಕನಸಿತ್ತು.