ಕ್ರೀಡೆ: ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಅವರು ಗುರುವಾರ ರಾತ್ರಿ ಬಾಕುದಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ ದಾಖಲೆ ಬರೆದಿದ್ದಾರೆ.
ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಜ್ಞಾನಂದ ಆಗಿದ್ದಾರೆ. 18 ವರ್ಷದ ಇವರು ರಣರೋಚಕ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದೇಶಬಾಂಧವ ಅರ್ಜುನ್ ಎರಿಗೈಸಿ ವಿರುದ್ಧ 5-4ರಿಂದ ಗೆಲುವು ಸಾಧಿಸಿ ಈ ವಿಶೇಷ ಸಾಧನೆ ಗೈದಿದ್ದಾರೆ.
ಈ ಗೆಲುವಿನೊಂದಿಗೆ, ಇವರು ಅಮೆರಿಕದ ಏಸ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೆಮಿಫೈನಲ್ನಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಮುಂದಿನ ವರ್ಷದ ಕ್ಯಾಡಿಡೇಟ್ಸ್ ಈವೆಂಟ್ನಲ್ಲಿ ಬಹುತೇಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.