ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅವರು ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ ಹಾಗೂ ಇಂದು ವೀಕೆಂಡ್ ಲಾಕ್ಡೌನ್ ಇರುವ ಕಾರಣ ಅಭಿಮಾನಿಗಳೊಂದಿಗೆ ಈ ಬಾರಿಯೂ ಹುಟ್ಟುಹಬ್ಬ ಆಚರಣೆಗೆ ಅವಕಾಶವಿಲ್ಲ.
ಹೀಗಾಗಿ ಸರಳವಾಗಿ ಕುಟುಂಬಸ್ಥರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಯಶ್. ಹುಟ್ಟುಹಬ್ಬ ಆಚರಣೆಯ ಫೋಟೋ, ವಿಡಿಯೋವನ್ನು ಪತ್ನಿ ರಾಧಿಕಾ ಪಂಡಿತ್ ಅವರು ಹಂಚಿಕೊಂಡಿದ್ದಾರೆ. ಯಶ್ಗಾಗಿ ಕುಟುಂಬಸ್ಥರು ವಿಶೇಷವಾದ ಕೇಕ್ ರೆಡಿ ಮಾಡಿದ್ದಾರೆ. ಕೆಜಿಎಫ್2ನಲ್ಲಿ ಇರುವ ಅಂಶಗಳನ್ನು ಒಳಗೊಂಡ ಕೇಕ್ ಕಟ್ ಮಾಡಿದ್ದಾರೆ ಯಶ್.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಕಲಾವಿದರು, ರಾಜಕಾರಣಿಗಳು ಯಶ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.