ಕ್ರಿಕೆಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ RCB) ತಂಡದ ಆಟಗಾರರು ಸೀಸನ್ 15 ರಲ್ಲಿಯು ಸಹ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾನುವಾರ ಮಧ್ಯಾಹ್ನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವ ಮೂಲಕ ತಮ್ಮ ಪರಿಸರ ಜಾಗೃತಿ ಕಾರ್ಯವನ್ನು ಮುಂದುವರಿಸುತ್ತಿದೆ.
ಪ್ರತಿ ವರ್ಷ ಆರ್‌ಸಿಬಿ ತಂಡ ಟೂರ್ನಿಯ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಪರಿಸರ ರಕ್ಷಣೆ ಕುರಿತಾಗಿ ವಿಶೇಷ ಜಾಗೃತಿ ಮೂಡಿಸುತ್ತಿತ್ತು. ಈ ಬಾರಿಯೂ ಕೂಡ ಹಸಿರು ಬಣ್ಣದ ಜೆರ್ಸಿ ತೊಟ್ಟು ಭಾನುವಾರ(ನಾಳೆ) ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಆಡಳಿದೆ. ಈಗಾಗಲೇ ಆಟಗಾರರು ಹಸಿರು ಬಣ್ಣದ ಜೆರ್ಸಿ ತೊಟ್ಟು ಕಾಣಿಸಿಕೊಳ್ಳುವ ವೀಡಿಯೋ ಆರ್‌ಸಿಬಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಗ್ರೀನ್ ಜೆರ್ಸಿ ಆರ್ಸಿಬಿಗೆ ಅನ್ಲಕ್ಕಿ!
ಆರ್‌ಸಿಬಿ ತಂಡ ಈ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದ ಕಳೆದ 5 ಪಂದ್ಯಗಳಲ್ಲೂ ಸೋತಿದೆ. ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಹೀಗಾಗಿಯೇ ಗ್ರೀನ್ ಜೆರ್ಸಿ ಆರ್‌ಸಿಬಿ ಪಾಲಿಗೆ ಅನ್ಲಕ್ಕಿ ಎಂಬ ಮಾತಿದೆ.
ಇದನ್ನು ಓದಿ: KGF ನಟ ಮೋಹನ್ ಜುನೇಜಾ ವಿಧಿವಶ
ಗ್ರೀನ್ ಜೆರ್ಸಿ ಪಂದ್ಯಗಳ ಫಲಿತಾಂಶ:
- 2011 – ಗೆಲುವು
- 2012 – ಸೋಲು
- 2013 – ಸೋಲು
- 2014 – ಸೋಲು
- 2015 – ಫಲಿತಾಂಶವಿಲ್ಲ
- 2016 – ಗೆಲುವು
- 2017 – ಸೋಲು
- 2018 – ಸೋಲು
- 2019 – ಸೋಲು
- 2020 – ಸೋಲು
- 2021 – (ನೀಲಿ ಜೆರ್ಸಿ) ಸೋಲು