ಭಾರತದಲ್ಲಿ ರೋಲ್ಸ್ – ರಾಯ್ಸ್ ಕಲಿನನ್ ಸೀರೀಸ್ II ಬಿಡುಗಡೆ

ಬೆಂಗಳೂರು: ವಿಶ್ವದ ಮೊದಲ ಸೂಪರ್ ಲಕ್ಷುರಿ ಎಸ್.ಯು.ವಿ. ಒರಿಜಿನಲ್ ಕಲಿನನ್ 2018ರಲ್ಲಿ ಬಿಡುಗಡೆಯಾಗಿದ್ದು, ತನ್ನ ವಿಶಿಷ್ಟತೆಯಿಂದ ಗಮನ ಸೆಳೆದಿತ್ತು. ಅದು ಭೂಮಿಯ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಸಂಚರಿಸುವ ನೈಜ ಆಫ್-ರೋಡ್ ಸಾಮರ್ಥ್ಯಗಳಿಂದ ಖ್ಯಾ ತಿ ಪಡೆದಿತ್ತು. ಅದೇ ಸಮಯಕ್ಕೆ ಅದು ಅಸಾಧಾರಣ ಸೌಖ್ಯ ಮತ್ತು ಯಾವುದೇ ಪ್ರದೇಶವಿರಲಿ `ಮ್ಯಾಜಿಕ್ ಕಾರ್ಪೆಟ್ ರೈಡ್’ ನೀಡುತ್ತದೆ. ಅದು ಸೂಪರ್ ಲಕ್ಷುರಿ ಎಸ್.ಯು.ವಿ.ಗಿಂತ ಏನೂ ಕಡಿಮೆಯಿಲ್ಲ. ಒರಟು ಆದರೆ ಪರಿಷ್ಕೃತ, ತಡೆರಹಿತ ಆದರೆ ಅವಿಚಲಿತವಾಗಿದೆ. ಇದರ ಯಶಸ್ಸು ವಿಶ್ವದಾದ್ಯಂತ ರೋಲ್ಸ್ ರಾಯ್ಸ್ ನಿರೀಕ್ಷೆಗಳನ್ನು ಮೀರಿದೆ ಮತ್ತು ಇಂದು ಕಲಿನನ್ಅನ್ನು ಅತ್ಯಂತ ಬೇಡಿಕೆಯ ರೋಲ್ಸ್ -ರಾಯ್ಸ್ ಆಗಿಸಿದೆ.

ಈ ಮೋಟಾರ್ ಕಾರಿನ ಅಸಾಧಾರಣ ಯಶಸ್ಸು ಮತ್ತು ವಿಶ್ವದ ಪ್ರತಿಯೊಂದು ಪ್ರದೇಶದಿಂದಲೂ ಅಭೂತಪೂರ್ವ ಸಕಾರಾತ್ಮಕ ಪ್ರತಿಕ್ರಿಯೆಯಿಂದ `ಎಸ್.ಯು.ವಿ.ಗಳ ರೋಲ್ಸ್ -ರಾಯ್ಸ್’ ವಿನ್ಯಾಸಗೊಳಿಸಲು ಅತ್ಯಂತ ಎಚ್ಚರಿಕೆ ವಹಿಸಲಾಗಿದೆ. ವಿನ್ಯಾಸಕಾರರು, ಎಂಜಿನಿಯರ್ ಗಳು ಮತ್ತು ಕುಶಲಿಗರು ಗ್ರಾಹಕರ ಅಭಿಪ್ರಾಯದ ಮೇಲೆ ಅರ್ಧ ದಶಕದಷ್ಟು ಶ್ರಮಿಸಿ, ವಿಶ್ವದ ಬ್ರಾಂಡ್ ಕಚೇರಿಗಳಿಂದ ಮಾಹಿತಿ ಪಡೆದು ಕಲಿನನ್ ಸುಧಾರಣೆಗೆ ಹೊಸ ತಂತ್ರಜ್ಞಾ ನಗಳನ್ನು ರೂಪಿಸಿದ್ದಾರೆ. ಇದು ರೋಲ್ಸ್ ರಾಯ್ಸ್ ಇತಿಹಾಸದಲ್ಲಿಯೇ ಅತ್ಯಂತ ವಿಸ್ತಾರ ಸೀರೀಸ್ II ಅಭಿವೃದ್ಧಿಯಾಗಿದ್ದು, ಇದು ಐಷಾರಾಮದ ಬದಲಾಗುತ್ತಿರುವ ನಿಯಮಗಳಿಗೆ ಮತ್ತು ವಿಕಾಸಗೊಳ್ಳುತ್ತಿರುವ ಬಳಕೆಯ ಮಾದರಿಗಳಿಗೆ ಸ್ಪಂದಿಸಿದ್ದರೂ ಕಲಿನನ್ ಅಸಾಧಾರಣ ಜನಪ್ರಿಯತೆಗೆ ಕಾರಣವಾದ ಅಗತ್ಯ ಕಾರಣಗಳನ್ನು ಉಳಿಸಿಕೊಳ್ಳುತ್ತದೆ.

“ಭಾರತದಲ್ಲಿ ಕಲಿನನ್ II ಸೀರೀಸ್ ಬಿಡುಗಡೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ರೋಲ್ಸ್ -ರಾಯ್ಸ್ ಗೆ ಮಹತ್ತರ ಮೈ ಲಿಗಲ್ಲು ಪ್ರತಿನಿಧಿಸುತ್ತದೆ. 2018ರಲ್ಲಿ ತನ್ನ ಮೂಲ ಬಿಡುಗಡೆಯ ದಿನದಿಂದಲೂ ಈ ಅಭೂತಪೂರ್ವ ಮೋಟಾರ್ ಕಾರ್ ಯುವ ಮತ್ತು ಹೆಚ್ಚು ವಿಸ್ತಾರ ಗ್ರಾಹಕರನ್ನು ಸೆಳೆದಿದೆ ಮತ್ತು ಇಂದು ಕಲಿನನ್ ಅತ್ಯಂತ ಹೆಚ್ಚು ಕೋರಿಕೆಯ ರೋಲ್ಸ್ ರಾಯ್ಸ್ ಆಗಿದೆ. ಕಲಿನನ್ ಸೀರೀಸ್ II ಹೊಸ ತಂತ್ರಜ್ಞಾ ನಗಳು, ಹೊಸ ಸಾಮಗ್ರಿಗಳು, ಎಚ್ಚರಿಕೆಯಿಂದ ಪರಿಗಣಿಸಲಾದ ಡಿಸೈ ನ್ ಅಪ್ಡೇಟ್ ಗಳು ಮತ್ತು ಸ್ವಯಂ-ಅಭಿವ್ಯಕ್ತಿಗೆ ಆವಿಷ್ಕಾ ರಕ ಅವಕಾಶಗಳನ್ನು ನೀ ಡುತ್ತದೆ” ಎಂದು ರೋಲ್ಸ್ -ರಾಯ್ಸ್ ಮೋಟಾರ್ ಕಾರ್ ಜನರಲ್ ಡೈರೆಕ್ಟರ್ ಏಷ್ಯಾ ಪೆಸಿಫಿಕ್ ಇರೇನ್ ನಿಕ್ಕೇನ್ ಹೇಳಿದರು.

ಗ್ರಾಹಕರು ಕಲಿನನ್ ಸೀರೀಸ್ II ಮತ್ತು ಬ್ಲಾಕ್ ಬ್ಯಾ ಡ್ಜ್ ಕಲಿನನ್ ಸೀರೀಸ್ II ಅನ್ನು ರೋಲ್ಸ್ -ರಾಯ್ಸ್ ಕಾರ್ಸ್ ಚೆನ್ನೈ ಮತ್ತು ರೋಲ್ಸ್ -ರಾಯ್ಸ್ ನವದೆಹಲಿಯಲ್ಲಿ ಖರೀದಿಸಬಹುದು. ಭಾರತದಲ್ಲಿ ಕಲಿನನ್ ಸೀರೀಸ್ II ಬೆಲೆ ರೂ. 10,50,00,000 ಗಳಿಂದ ಪ್ರಾರಂಭವಾಗುತ್ತದೆ. ಬ್ಲಾಕ್ ಬ್ಯಾ ಡ್ಜ್ ಕಲಿನನ್ ಸೀರೀಸ್ II ಬೆಲೆ ರೂ. 12,25,00,000 ಗಳಿಂದ ಪ್ರಾರಂಭಗೊಳ್ಳುತ್ತದೆ. ಮೊದಲ ಸ್ಥಳೀಯ ಗ್ರಾಹಕರ ಡೆಲಿವರಿಗಳು 2024ರ ನಾಲ್ಕನೇ ತ್ರೈ ಮಾಸಿಕದಲ್ಲಿ ಪ್ರಾರಂಭವಾಗುತ್ತವೆ.

ರೋಲ್ಸ್ -ರಾಯ್ಸ್ ಬೆಲೆಯು ಗ್ರಾಹಕರ ನಿರ್ದಿ ಷ್ಟತೆಗಳನ್ನು ಆಧರಿಸಿರುತ್ತದೆ. ಪ್ರತಿ ರೋಲ್ಸ್ -ರಾಯ್ಸ್ ಕೂಡಾ ಬೆಸ್ಪೋಕ್ ಆಗಿದೆ. ಮೊದಲ ಗ್ರಾಹಕರ ಡೆಲಿವರಿಯಿಂದಲೂ ಕಲಿನನ್ ಆಫ್-ರೋಡ್ ಮೋಟಾರ್ ಕಾರ್ ಎಂಬ ತನ್ನ ಸಾಮರ್ಥ್ಯವನ್ ನುಸಾಬೀತುಪಡಿಸಿದ್ದು ತನ್ನ ಮಾಲೀಕನನ್ನು ಹಿಂದೆಂದೂ ರೋಲ್ಸ್ -ರಾಯ್ಸ್ ನಲ್ಲಿ ಸಂಚರಿಸಲಾಗದ ಪ್ರದೇಶಗಳಿಗೆ ಕೊಂಡೊಯ್ದಿದೆ. ಆದಾಗ್ಯೂ ಈ ಮಾದರಿಯು ಅದರ ವೈ ವಿಧ್ಯತೆ ಮತ್ತು ಪ್ರಯತ್ನರಹಿತ ಅಂತಃಸ್ಸತ್ವ ಹೊಂದಿದ್ದು ಕಲಿನನ್ ಅನ್ನು ಹಲವಾರು ಮಾಲೀಕರಿಗೆ `ಡೈಲಿ ಡ್ರೈವರ್’ ಆಗಿಸಿದೆ; ಅಲ್ಲದೆ ಅಸಂಖ್ಯ ಗ್ರಾಹಕರು ರೋಲ್ಸ್ -ರಾಯ್ಸ್ ಗೆ ಹೇಳಿದ್ದೇನೆಂದರೆ ಬೇರೆ ಯಾವ ಎಸ್.ಯು.ವಿ.ಯೂ ಕಲಿನನ್ ನ 6.75-ಲೀ ಟರ್ ವಿ12 ಎಂಜಿನ್ ನೀಡುವ ಅದೇ ಪ್ರಯತ್ನರಹಿತ ಕಾರ್ಯ ಕ್ಷಮತೆ ನೀ ಡುವುದಿಲ್ಲ.

ತಜ್ಞರು ಗುರುತಿಸಿದಂತೆ ಹೆಚ್ಚಿನ ಸಂಖ್ಯೆ ಯ ರೋಲ್ಸ್ -ರಾಯ್ಸ್ ಗ್ರಾಹಕರು ನಗರ ಪ್ರದೇಶಗಳಲ್ಲಿದ್ದು ವಿಶ್ವದ ದೊಡ್ಡಮೆಟ್ರೊಪೊಲಿಸ್ಗಳಿಂದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿದ್ದಾರೆ. ಕಲಿನನ್ ತನ್ನ ಗ್ರಾಹಕರಿಗೆ ಎದ್ದು ಕಾಣುವಂತೆ ಅವರ ಗುಣ ಹೊರಹೊ ಮ್ಮುವಂತೆ ಮಾಡುವ ಸೂಪರ್-ಲಕ್ಷುರಿ ಉತ್ಪನ್ನವಾಗಿದೆ. ಮಾಲೀಕರು ತಮ್ಮ ಮೋಟಾರ್ ಕಾರುಗಳನ್ನು ತಾವೇ ಚಾಲಿಸುವುದರಲ್ಲೂ ಬದಲಾವಣೆ ಬಂದಿದೆ. ಕಲಿನನ್ ಮೊದಲ ಬಾರಿಗೆ ಬಿಡುಗಡೆಯಾದಾಗ ಶೇ .70ಕ್ಕ್ಕಿಂತ ಕಡಿಮೆ ಸ್ವಯಂ-ಚಾಲನೆಯಲ್ಲಿದ್ದವು; ಇಂದು ಬಹುತೇಕ ಪ್ರತಿ ಕಲಿನನ್ ಕೂಡಾ ತನ್ನ ಮಾಲೀಕರಿಂದ ಚಾಲಿಸಲ್ಪಡುತ್ತಿವೆ; ಶೇ .10ರಷ್ಟು ಗ್ರಾಹಕರು ಚಾಲಕರ ಸೇ ವೆ ಪಡೆಯುತ್ತಿದ್ದಾರೆ. ಕಲಿನನ್ 2010ರಲ್ಲಿ ರೋಲ್ಸ್ ರಾಯ್ಸ್ ಹೊಂದುತ್ತಿದ್ದಗ್ರಾಹಕರ ಸರಾಸರಿ ವಯಸ್ಸು 56 ಆಗಿದ್ದರೆ, ಅದು ಈಗ 43 ಆಗಿದೆ.

ನಗರಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ಯುವ ಗ್ರಾಹಕರು ಮತ್ತು ಸ್ವಯಂ ಚಾಲನೆಯತ್ತ ಬದಲಾವಣೆಯು ಕಲಿನನ್ ಸೀರೀಸ್ ಹೊರಾಂಗಣದ ಸರ್ಫೇಸ್ ಟ್ರೀಟ್ ಮೆಂಟ್ ಮತ್ತು ಡೀಟೈಲ್ ನಲ್ಲಿ ಮಹತ್ತರ ಬದಲಾವಣೆ ತಂದಿದೆ. ಹೊಳಪಿನ ಸ್ಕೈಸ್ಕ್ರಾ ಪರ್ ಗಳಿಂದ ಕಲಿನನ್ ಮನೆಯಲ್ಲಿ ಇರುವಂತೆ ಭಾಸವಾಗುತ್ತದೆ. ಟೈಲ್ ಡೇ ಟೈಮ್ ರನ್ನಿಂಗ್ ಲೈ ಟ್ ಗ್ರಾಫಿಕ್ಸ್ ಮೂಲಕ ಕಲಿನನ್ ಸೀರೀಸ್ II ಹಗಲು ಮತ್ತು ರಾತ್ರಿಯಲ್ಲಿ ಗುರುತಿಸಬಹುದು.

Leave a Reply

Your email address will not be published. Required fields are marked *