ಸಿನಿಮಾ: ಸಂಜಯ್ ದತ್ ಹುಟ್ಟುಹಬ್ಬದ ಪ್ರಯುಕ್ತ ಕೆ.ಜಿ.ಎಫ್ (KGF) ಅಭಿಮಾನಿಗಳಿಗೆ ಇಂದು ಅಧೀರನ ದರ್ಶನವಾಗಿದೆ. ಖಡ್ಗ ಹಿಡಿದು ಖಡಕ್ ಆಗಿ ನಿಂತ ಅಧೀರನ ಲುಕ್ ಸಿನಿಪ್ರಿಯರ ಮನಸನ್ನೂ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದನ್ನೂ ಮಾಡುತ್ತಿದೆ.
ಅಂದ ಹಾಗೇ ಸಂಜಯ್ ದತ್ ಯಾನೆ ಅಧೀರನ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗುತ್ತೆ ಅಂತನೇ ನಿರೀಕ್ಷಿಸಲಾಗಿತ್ತು. ಆದ್ರೆ ಪ್ರಶಾಂತ್ ನೀಲ್ ಹಾಗೂ ಬಳಗ ಪೋಸ್ಟರ್ ಮೂಲಕ ತಮ್ಮ ಪ್ರೀತಿಯ ಅಧೀರನಿಗೆ ಹುಟ್ಟುಹಬ್ಬದ ಶುಭಾಶಯವನ್ನ ಕೋರಿದೆ. ಇನ್ನೂ ಕೆ.ಜಿ.ಎಫ್ ತಂಡದಿಂದ ಸಿಕ್ಕ ಈ ಸ್ವೀಟ್ ಗಿಫ್ಟ್ ಸಂಜಯ್ ದತ್ ಅವ್ರಿಗೂ ಖುಷಿ ನೀಡಿದೆ.
ಈ ಕಾರಣದಿಂದಾಗಿಯೇ ಕೆ.ಜಿ.ಎಫ್ ತಂಡಕ್ಕೆ ಧನ್ಯವಾದ ಹೇಳಿರುವ ಸಂಜು ಬಾಬಾ ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವ.ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾದಿದ್ದು ವ್ಯರ್ಥವಾಗುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಭರವಸೆಯನ್ನೂ ನೀಡಿದ್ದಾರೆ.