ದೆಹಲಿ: ದೆಹಲಿಯ ಐಐಟಿ ದೆಹಲಿ ಮೇಲ್ಸೇತುವೆ ಬಳಿ ರಸ್ತೆ ಕುಸಿತಗೊಂಡಿದೆ.ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೌಜ್ ಖಾಸ್ ಪ್ರದೇಶದಲ್ಲಿ ರಸ್ತೆ ಕುಸಿತಕಂಡಿದೆ.
ಇದ್ರಿಂದ ಐಐಟಿ ಮೇಲ್ಸೇತುವೆ ಕೆಳಗೆ ಟ್ರಾಫಿಕ್ ಜಾಮ್ ಉಂಟಾಗಿದೆ.ಅಧ್‌ಚಿನಿಯಿಂದ ಐಐಟಿಗೆ ತೆರಳುವ ಮಾರ್ಗವನ್ನ ಬದಲಿಸಲಾಗಿದೆ.ಹವಾಮಾನ ಇಲಾಖೆ ಪ್ರಕಾರ ದೆಹಲಿಯಲ್ಲಿ ಬೆಳಗ್ಗೆ 8.30ರವರೆಗೆ 43.6 ಮಿ.ಮೀ ಮಳೆಯಾಗಿದೆ ಎಂದು ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.ಶನಿವಾರ ಮಿತವಾದ ಮಳೆ ಸುರಿಯುವ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.