ಮಂಡ್ಯ: ಮಂಡ್ಯ ಜನರ ಪ್ರೀತಿ, ಅಭಿಮಾನಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಮನಸೋತಿದ್ದಾರೆ. ಇತ್ತೀಚಿಗಷ್ಟೇ ಸನ್ನಿ ತನ್ನ 41 ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ವಿಶ್ವದಾದ್ಯಂತ ಸನ್ನಿ ಅಭಿಮಾನಿಗಳು ಶುಭಾಶಯ ಕೊರಿದ್ದರು.
ಇನ್ನು ಮಂಡ್ಯ ಜಿಲ್ಲೆಯ ಕೊಮ್ಮೆರಹಳ್ಳಿಯ ಸನ್ನಿಲಿಯೋನ್ ಅಭಿಮಾನಿ ಬಳಗ ವಿಭಿನ್ನವಾಗಿ ಸನ್ನಿ ಹುಟ್ಟುಹಬ್ಬ ಆಚರಿಸಿದ್ದರು. ಸನ್ನಿ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನದಾ ಜೊತೆಗೆ ರಕ್ತದಾನ ಏರ್ಪಡಿಸಿದ್ದರು. ಫ್ಲೆಕ್ಸ್ ಹಾಕಿಸಿ, ಬಾಡೂಟ ಹಂಚಿ ಮಕ್ಕಳಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅಲ್ಲದೆ ಅನಾಥ ಮಕ್ಕಳ ತಾಯಿ ಎಂದು ಸನ್ನಿಲಿಯೋನ್ನ 20 ಅಡಿ ಉದ್ದದ ಫ್ಲೆಕ್ಸ್ ಸಹ ಹಾಕಿಸಿದ್ದರು.
ಅಭಿಮಾನಿಗಳ ಅಭಿಮಾನಕ್ಕೆ ಪ್ರತಿಕ್ರಿಯಿಸಿದ ಸನ್ನಿ ಲಿಯೋನ್
ಮಂಡ್ಯ ಜಿಲ್ಲೆಯಲ್ಲಿ ಕೊಮ್ಮೆರಹಳ್ಳಿಯ ಅಭಿಮಾನಿಗಳು ತನ್ನ ಹುಟ್ಟುಹಬ್ಬ ಆಚರಿಸಿದ ಸುದ್ದಿ ತಿಳಿದು ಟ್ವಿಟರ್’ನಲ್ಲಿ ಪ್ರತಿಕ್ರಿಯಿಸಿರುವ ಸನ್ನಿ ಧನ್ಯವಾದ ಅರ್ಪಿಸಿದ್ದು, ‘ಇದು ನಂಬಲಸಾಧ್ಯ. ನಿಮ್ಮ ಗೌರವಾರ್ಥ ನಾನೂ ಹೋಗಿ ರಕ್ತದಾನ ಮಾಡುತ್ತೇನೆ!! ತುಂಬಾ ಧನ್ಯವಾದಗಳು! ನೀವೆಲ್ಲರೂ ನಿಜವಾಗಿಯೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ! ನಿಮ್ಮನ್ನು ಪ್ರೀತಿಸುತ್ತೇನೆ.’ ಅಂತ ಟ್ವೀಟ್ ಮಾಡಿದ್ದಾರೆ.