ಕ್ರೀಡೆ: ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಥಾಮಸ್ ಕಪ್ ಟೂರ್ನಿಯಲ್ಲಿ ದ್ವಿಗ್ವಿಜಯ ಸಾಧಿಸಿದ್ದು, 14 ಬಾರಿಯ ಚಾಂಪಿಯನ್ ಆಗಿದ್ದ ಇಂಡೋನೇಷ್ಯಾ ತಂಡವನ್ನು ಮಣಿಸುವ ಮೂಲಕ 73 ವರ್ಷಗಳ ಇತಿಹಾಸ ಹೊಂದಿರುವ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ.
ಇಂಡೋನೇಷ್ಯಾ ತಂಡವನ್ನ 3-0 ಅಂತರದಲ್ಲಿ ಸೋಲಿಸಿ ಚೊಚ್ಚಲ ಥಾಮಸ್ ಕಪ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ಭಾರತ ಗೆದ್ದಿದೆ. ಚೀನಾ, ಇಂಡೋನೇಷ್ಯಾ, ಜಪಾನ್, ಡೆನ್ಮಾಕ್ ಬಳಿಕ ಥಾಮಸ್ ಕಪ್ ಗೆದ್ದ 6ನೇ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತಕ್ಕೆ ವಿಶ್ವಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಪದಕ ಗೆದ್ದುಕೊಟ್ಟಿರುವ ಚಾಂಪಿಯನ್ ಆಟಗಾರರಾದರ ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಅಕ್ಷರಶಃ ಮಿಂಚಿನ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಡಬಲ್ಸ್ ವಿಭಾಗದಲ್ಲೂ ಯುವ ಜೋಡಿ ಚಿರಾಟ್ ಶೆಟ್ಟಿ ಮತ್ತು ಸಾತ್ವಿಕ್ ಸಾಯ್‌ರಾಜ್ ಸ್ಮರಣೀಯ ಪ್ರದರ್ಶನ ಹೊರತಂದು ಸ್ಮರಣೀಯ ಜಯ ತಂದುಕೊಟ್ಟರು.
ಈ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದ ಭಾರತ ತಂಡದ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.