ಟೋಕಿಯೋ: ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಫೈನಲ್ ತಲುಪಿದ್ದಾರೆ. 64.00 ಮೀಟರ್ ದೂರದವರೆಗೆ ಡಿಸ್ಕಸ್ ಥ್ರೋ ಹಾರಿಸುವ ಮೂಲಕ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತದ ಕಮಲ್ ಪ್ರೀತ್ ಕೌರ್ ಈ ಬಾರಿಯ ಒಲಿಂಪಿಕ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ.
ಅಮೆರಿಕಾದ ವಲರೈ ಅಲ್ಲಮ್ ಕೂಡ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಡಿಸ್ಕಸ್ ಥ್ರೋ ಎಸೆತದಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ ಸ್ಪರ್ಧಿಯಿಂದ ದಾಖಲಾದ ಶ್ರೇಷ್ಠ ಸಾಧನೆಯಾಗಿದೆ.