ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಅನೇಕ ಆಕಾಂಕ್ಷಿಗಳು ಹಗಲು-ರಾತ್ರಿ ಎನ್ನದೆ ಓದಿನಲ್ಲಿ ಮಗ್ನರಾಗಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟರೂ ಸರ್ಕಾರಿ ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ನೋಂದು ಕೆಟ್ಟ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಗ್ರಾಮಿಣ ಯುವ ಪ್ರತಿಭೆ ಎಲೆ ಮರೆಕಾಯಿ ಹಾಗೆ ಉಳಿದು ಬಿಟ್ಟಿದೆ..!
ಹೌದು. ರವಿಕಾಂತ್.ವೈ.ಕೆ ಕೋಡ್ – ವರ್ಡ್ ಮೂಲಕ ಅಭ್ಯಾಸ ಮಾಡಿಕೊಂಡು ಇಂದು ಭಾರತದ ಅತಿದೊಡ್ಡ ಆನ್ಲೈನ್ ಕಲಿಕಾ ವೇದಿಕೆಯಿಗಿರುವ “ಅನ್ ಅಕಾಡೆಮಿ”ಯಲ್ಲಿ ಕರ್ನಾಟಕದ ಎಂಬತ್ತಕ್ಕೂ ಹೆಚ್ಚಿನ ಎಜುಕೇಟರ್ ಗಳ ಪೈಕಿ ಟಾಪ್-5 ಸ್ಥಾನ ಪಡೆದು ಕರ್ನಾಟಕದ ಹೆಮ್ಮೆಯ ಎಜುಕೇಟರ್ ಆಗಿದ್ದಾರೆ. ಆದರೆ ಇವರ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಅನ್ ಅಕಾಡೆಮಿ ಒಂದು ಲರ್ನಿಂಗ್ ಅ್ಯಪ್. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉತ್ತಮ ಕಲಿಕಾ ವೇದಿಕೆ. ಅದೆಷ್ಟೋ ವಿಧ್ಯಾರ್ಥಿಗಳು ಉಚಿತ ತರಗತಿಯ ಮೂಲಕವೇ ಸರ್ಕಾರಿ ನೌಕರಿ ಪಡೆದಿದ್ದಾರೆ. ಲಾಕ್ ಡೌನ ಸಮಯದಲ್ಲಿ ಮನೆಯಲ್ಲಿ ಕುಳಿತು ಬಿಡುವಿನ ವೇಳೆಯಲ್ಲಿ ಓದುವವರಿಗೆ ಇದು ಉಪಯುಕ್ತವಾಗಿದೆ. ಇಂತಹ ಆನ್ ಲೈನ್ ಕಲಿಕಾ ವೇದಿಕೆಯಲ್ಲಿ ಭೋದಕರಾಗಿರುವ ರವಿಕಾಂತ್ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

ಇವರು ಅನ್ ಅಕಾಡೆಮಿ ತರಗತಿ ಆರಂಭಿಸುವಾಗ ಹೇಳುವ ಕಿರು ಪರಿಚಯ ಡೈಲಾಗ್ ವಿದ್ಯಾರ್ಥಿಗಳ ಹಾಟ್ ಫೆವರಿಟ್. ಹುಟ್ಟಿದ್ದು ತುಮಕೂರು, ಬೆಳೆದಿದ್ದು ಮಂಡ್ಯ ಮತ್ತು ಉತ್ತರ ಕನ್ನಡ, ಓದಿದ್ದು ಹಾಸನ, ಕಾಂಪಿಟೇಟಿವ್ ಎಕ್ಸಾಂ ಪ್ರಿಪೇರೆಷನ್ ಮಾಡಿದ್ದು ಧಾರವಾಡ ಹಾಗೂ ವರ್ಕ್ ಮಾಡುತ್ತಿರುವುದು ಬೆಂಗಳೂರು, ಪ್ರೆಸೆಂಟ್ ಬುಕ್ ಬರೆಯಲು ಉಳಿದುಕೊಂಡಿರೊದು ಧಾರವಾಡ… ನಿಮಗೆ 10% ಡಿಸ್ಕೌಂಟ್ ಬೇಕೇ..? ಬಳಕೆ ಮಾಡಿ ರೆಫೆರಲ್ ಕೋಡ್ RAVIYK ಎಂಬ ಪ್ರಾಸದ ಮೂಲಕ ತರಗತಿ ಆರಂಭವಾಗುವುದು ಎಲ್ಲರಿಗೂ ಇಷ್ಟವಾಗುತ್ತದೆ.
ಬೇರೆ ವಿಜ್ಞಾನದ ತರಗತಿಗಳಿಗೆ ಹೋಲಿಸಿದರೆ ಇವರ ತರಗತಿಗಳು ತುಂಬಾ ಭಿನ್ನ ಮತ್ತು ವಿಶೇಷ. ಹೇಗೆಂದರೆ ಇವರು ಮಾಡೋ 2pm MCQ ತರಗತಿಗಳು ಥಿಯರಿ ಕ್ಲಾಸ್ ನಂತೆ ಒಂದು ಪ್ರಶ್ನೆ ಕೇಳಿದ್ರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳನ್ನು ಕೇಳಿ ಪುನರಾವರ್ತನೆ ಮಾಡಿಸುತ್ತಾರೆ. ಜೊತೆಗೆ ಎಲ್ಲಾ ಆಪ್ಷನ್ಗಳನ್ನು ವಿವರಣಾತ್ಮಕವಾಗಿ ವಿವರಿಸುತ್ತಾರೆ.
ಇವರ ಕಥನಾತ್ಮಕ ರೂಪದ ಭೋದನ ಶೈಲಿ ವಿದ್ಯಾರ್ಥಿಗಳಿಗೆ ರವಿಯ ಕಿರಣಗಳಂತೆ ಬೆಳಕು ನೀಡುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಇವರ ತರಗತಿಯ ವಿಶುವಲ್ ರೆಪ್ರೇಸೆನ್ಟೇಷನ್ ಮತ್ತು ಡಯಾಗ್ರಾಂ ಪಾಠಗಳನ್ನು ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲ ದೀರ್ಘಕಾಲ ನೆನಪಿನಲ್ಲಿಡಲು ಸಹಾಯಕವಾಗಿದ್ದು ತುಂಬಾ ಸರಳವಾಗಿ ಅರ್ಥವಾಗುತ್ತದೆ.
ಸೈನ್ಸ್ ಗಂಧ-ಗಾಳಿಯೂ ಗೋತ್ತಿಲ್ಲದ ನನ್ನಂತ ಅದೆಷ್ಟೋ ವಿದ್ಯಾರ್ಥಿಗಳಿಗೆ ಇವರ ತರಗತಿಯಿಂದಲೇ ತಿಳಿದಿದ್ದು ಕೇವಲ Alphabet ಅಕ್ಷರ ಗೋತ್ತಿದ್ದರೆ ಸಾಕು ಸೈನ್ಸ್ ಕಬ್ಬಿಣದ ಕಡಲೆ ಅಲ್ಲ ಎಂದು ಕೋಡ್-ವರ್ಡ್, ಸ್ಟೋರಿಯಂತಹ ಶಾರ್ಟ್-ಟ್ರಿಕ್ ಮೂಲಕ ಅದನ್ನು ನಿರೂಪಿಸಿದ್ದಾರೆ. ಯಾವುದೇ ವಿಷಯವನ್ನು ತಿಳಿಸುವ ಮೊದಲು ಎಲ್ಲಾ ಆಯಾಮದಲ್ಲು ಖಚಿತಪಡಿಸಿಕೊಂಡೆ ತರಗತಿಯಲ್ಲಿ ಬೋಧಿಸಲಾಗುತ್ತದೆ. ಹಳ್ಳಿಯ ವಿದ್ಯಾರ್ಥಿಗಳಿಂದ ಡೆಲ್ಲಿ (ಆಂಗ್ಲ ಮಾಧ್ಯಮದ ) ವಿದ್ಯಾರ್ಥಿಗಳಿಗೂ ಅರ್ಥಮಾಡಿಸುವ ಭೋದನ ಶೈಲಿ ಇವರದು. ಕಟ್ಟಕಡೆಯ ವಿದ್ಯಾರ್ಥಿಗೂ ಅರ್ಥ ಆಗುವವರೆಗೆ ಮುಂದೆ ಹೋಗದ ಆ ಗುಣ ವಿರಳ.
ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿರುವ ರವಿಕಾಂತ್.ವೈ.ಕೆ ಅವರ ನಡೆದು ಬಂದ ಹಾದಿ ಬಹಳ ಕಠೀಣವಾದದ್ದು. ರವಿಕಾಂತ್ ಮೂಲತಃ ತುಮಕೂರಿನ ಕುಣಿಗಲ್ ತಾಲ್ಲೂಕು ಯಾಚನಹಳ್ಳಿಯವರು. ಕೃಷ್ಣೇಗೌಡ ವೈ.ಬಿ. ಮತ್ತು ಭಾರತಿ ದಂಪತಿಯ ಪುತ್ರ ರವಿಕಾಂತ್. ಸ್ನಾತ್ತಕೋತ್ತರ ವಿಜ್ಞಾನ ಪದವಿಧರರಾಗಿರುವ ಇವರು ಬಾಲ್ಯಾದಿಂದಲೂ ಚುರುಕು ಬುದ್ಧಿಯವರಾಗಿದ್ದರು. ಪದವಿ ವ್ಯಾಸಾಂಗ ಮಾಡುವಾಗ ಇವರನ್ನ ಕ್ವಷನ್ ಬ್ಯಾಂಕ್ ಎಂದು ಸಹಪಾಟಿಗಳು ರೇಗಿಸುತ್ತಿದ್ದರಂತೆ. ಇದ್ಯಾವುದನ್ನು ತಲೆಗೆ ಅಚ್ಚಿಕೊಳ್ಳದ ರವಿಕಾಂತ್ ತಮ್ಮ ಪರಿಶ್ರಮದಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸೈನ್ಸ್ ಕ್ವಿಜ್ ನಲ್ಲಿ 6-7 ಬಾರಿ ಪ್ರಶಸ್ತಿ ಪಡೆದು ಎಲ್ಲರ ಬಾಯಿ ಮುಚ್ಚಿಸಿದ್ದರಂತೆ.
ಇದಷ್ಟೇ ಅಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸೆಮಿನಾರ್ ನಲ್ಲಿ ಇವರು ಮಾಡಿದ ರೈಲ್ವೆ ಪೈರ್ ಡಿಡೆಕ್ಟರ್ ಮಾಡೆಲ್ ಗೆ ಜಿಲ್ಲಾ ಮಟ್ಟದಲ್ಲಿ 3 ಬಾರಿ ಪ್ರಶಸ್ತಿ ಬಂದಿದ್ದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಎಂದು ಪತ್ರಿಕೆಯಲ್ಲಿ ಗುರ್ತಿಸಿಕೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಸೈನ್ಸ್ ಕಾಲೇಜ್ಗಳ Exhibition ನಲ್ಲಿ ರೈಲ್ವೆ ಪೈರ್ ಡಿಡೆಕ್ಟರ್ , ಸುನಾಮಿ ಡಿಟೆಕ್ಟರ್, ಮಾಡೆಲ್ ಮತ್ತು ತ್ರಿಡಿ ಪ್ರಿಂಟಿಂಗ್, ಪ್ಲೈಯಿಂಗ್ ಕಾರ್ ಕುರಿತ ಸೆಮಿನಾರ್ ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದು ತಮ್ಮ ಕಾಲೇಜನ್ನು ರಾಜ್ಯ ಮಟ್ಟದವರೆಗೂ ಪ್ರತಿನಿಧಿಸಿದ್ದಾರೆ. ಅಂದಿನ ಟೀಕೆಗಳ ಬಗ್ಗೆ ರವಿಕಾಂತ್ ಅವರು “ಒಮ್ಮೆ ಪ್ರಶ್ನಿಸಿದವರು ಅಂದು ಮಾತ್ರ ಮೂರ್ಖನಾಗುತ್ತಾನೆ ಆದರೆ ಎಂದು ಪ್ರಶ್ನಿಸದವರು ಜೀವನ ಪರ್ಯಂತ ಮೂರ್ಖರಾಗೇ ಉಳಿದು ಬಿಡುತ್ತಾರೆ” ಎಂದು ಇಂದು ಉತ್ತರಿಸುತ್ತಾರೆ.
ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯ ಆರಂಭದಲ್ಲಿ ಸರಿಯಾಗಿ ಗೈಡ್ ಮಾಡುವವರಿಲ್ಲದೆ ಅಸಯಕರಾಗಿದ್ದಾಗ ಅಣ್ಣ ತೇಜಸ್ವಿ ಅವರ ಪ್ರೇರಣಾತ್ಮಕ ನುಡಿಗಳು ಮತ್ತು ಆತ್ಮಸ್ಥೈರ್ಯ ಇವತ್ತಿನ ಈ ಸಾಧನೆಗೆ ಕಾರಣ ಎನ್ನುವ ಇವರಿಗೆ ದುಡಿದು ತಿನ್ನುವ ಸಮಯದಲ್ಲಿ ಕುಳಿತು ತಿಂದ್ರೆ ಕುಳಿತು ತಿನ್ನುವ ಸಮಯದಲ್ಲಿ ಬೇಡಿ ತಿನ್ನಬೇಕಾಗುತ್ತದೆ ಎಂಬ ಮಾತೇ ಮಾರ್ಗದರ್ಶಿಯಾಗಿ ಯಾವುದೇ ಗೈಡ್ ಸಹಾಯವಿಲ್ಲದಿದ್ದರು ತಮ್ಮ ಓದಿನ ಮೇಲೆ ವಿಶ್ವಾಸವಿಟ್ಟು ಏಕಾಂಗಿಯಾಗಿ ಸತತ ಪರಿಶ್ರಮದಿಂದ ಅಭ್ಯಸಿಸಿ ಇಂದು ನೆಚ್ಚಿನ ವಿಷಯವನ್ನು ಬೋಧಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾಸ್ಟರ್ ಆಫ್ ಸೈನ್ಸ್ , ಕಿಂಗ್ ಆಫ್ ಕೋಡ್-ವರ್ಡ ಆಗಿದ್ದಾರೆ.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳೇ ಆರ್.ಕೆ. ಸೈನ್ಸ್ ಎಂದು ಟೆಲಿಗ್ರಾಂ ಗೆ ನಾಮಕರಣ ಮಾಡಿದ್ದು ಅವರೇ ಬೆಳೆಸುತ್ತಿದ್ದಾರೆ. ಶೀಘ್ರದಲ್ಲೇ ವಿದ್ಯಾರ್ಥಿಗಳು ಕೊಟ್ಟ ಹೆಸರಿನ ಆರ್.ಕೆ. ಸೈನ್ಸ್ ಪುಸ್ತಕವು ಮಾರುಕಟ್ಟೆ ಲಗ್ಗೆ ಇಡಲಿದೆ.
ಇವರು ಸರ್ಕಾರಿ ಉದ್ಯೋಗ ಎಂದು ಕುಳಿತಿದ್ದರೆ ಇಷ್ಟೇಲ್ಲಾ ಸಾಧಿಸಲು ಆಗುತ್ತಿರಲಿಲ್ಲ ಅಲ್ಲವೇ ಆದ್ದರಿಂದ ಇವರು ಹೇಳುವಂತೆ ಏನನ್ನೂ ಮಾಡ್ಬೇಕು ಅಂತ ಯೋಚಿಸಬೇಡಿ ಏನ್ ಮಾಡ್ಬೇಕು ಅದನ್ನ ಮಾಡಿ ಏನು ಆಗಬೇಕು ಅಗ್ತಿರಾ. ಕನಸು ಕಾಣಬೇಕು, ಆದರೆ ಅದು ಕೈಗೆಟಕುವಂತೆ ಇರಬೇಕು. ಎಷ್ಟು ಸಾಮಾನ್ಯ ಜೀವನ ನಡೆಸುತ್ತೇವೋ ಅಷ್ಟೇ ವೇಗವಾಗಿ ಜೀವನದಲ್ಲಿ ಬೆಳೆಯುತ್ತೇವೆ. ಎಷ್ಟೇ ಎತ್ತರಕ್ಕೆ ಬೆಳೆದರು ಪಾದ ನೆಲದ ಮೇಲೆ ಇರಬೇಕು ಎನ್ನುವ ಕಿವಿಮಾತುನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾರೆ.
ಎದೆಯ ಹಣತೆಯಲ್ಲಿ ಅಕ್ಕರದ ದೀಪ ಹಚ್ಚಿ ನಮ್ಮಂಥ ಅಗಣಿತ ವಿದ್ಯಾರ್ಥಿಗಳ ಬಾಳಿಗೆ ಭವ್ಯ ಬೆಳಕು ನೀಡುತ್ತಿರುವ ಭಾರತದ ಅತಿದೊಡ್ಡ ಕಲಿಕಾ ವೇದಿಕೆಯಾಗಿರುವ Unacademyಯ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ಮಾಡುತ್ತಿರುವ ಕಿಂಗ್ ಆಫ್ ಕೋಡ್-ವರ್ಡ್ ರವಿಕಾಂತ್.ವೈ.ಕೆ. ಗುರುಗಳಿಗೆ ಅನಂತ-ಅನಂತ ಧನ್ಯವಾದಗಳು.
– ರಕ್ಷಿತ .ಬಿ.ಎನ್
ಪತ್ರಿಕೋದ್ಯಮ ವಿದ್ಯಾರ್ಥಿನಿ.