ಗೋವಾ ಸಿಎಂ ಭೇಟಿಯಾದ ಯಶ್ ದಂಪತಿ: ಕಾರಣವೇನು ಗೊತ್ತಾ..?

ಗೋವಾ: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಇಂದು ಭೇಟಿಯಾಗಿದ್ದಾರೆ.

ಸ್ವತಃ ಸಿಎಂ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಜಿಎಫ್ ಸೂಪರ್ ಸ್ಟಾರ್ ಯಶ್​, ಅವರ ಪತ್ನಿ ರಾಧಿಕಾ ಪಂಡಿತ್ ಮತ್ತು ತಂಡವನ್ನು ಪಣಜಿಯಲ್ಲಿ ಭೇಟಿದ್ದು ಸಂತಸ ತಂದಿದೆ ಎಂದು ಪ್ರಮೋದ್ ಸಾವಂತ್ ಟ್ವೀಟ್​ ಮಾಡಿದ್ದಾರೆ.

ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲಿಯೂ ಕೆಜಿಎಫ್‌ 2 ಭಾರೀ ಸದ್ದು ಮಾಡಿದ ಬೆನ್ನಲ್ಲೇ ನಟ ಯಶ್ ಪಾಲಿಟಿಕ್ಸ್​ಗೆ ಎಂಟ್ರಿ ಕೊಡುವ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ಮುಂದಿರುವ ಯಶ್ ದಂಪತಿ ಗೋವಾ ಸಿಎಂ ಅವರನ್ನು ನೇರವಾಗಿ ಭೇಟಿಯಾಗಿರುವುದು ಅನೇಕ ಚರ್ಚೆಗಳಿಗೆ ನಾಂದಿ ಹಾಡಿದೆ.

Leave a Reply

Your email address will not be published. Required fields are marked *