ಮೈಸೂರು, ಮೇ 27, 2026: ಗೃಹೋಪಯೋಗಿ ಉಪಕರಣಗಳ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆಯಾದ BSH Hausgeräte GmbHನ ಅಂಗ ಸಂಸ್ಥೆಯಾದ BSH Home Appliances ಪ್ರೈವೇಟ್ ಲಿಮಿಟೆಡ್, ಟಾಪ್ ಲೋಡ್ ವಾಷಿಂಗ್ ಮಷಿನ್ ವಿಭಾಗದಲ್ಲಿ ವೇಗವಾದ ಬೆಳವಣಿಗೆ ಸಾಧಿಸುವ ಉದ್ದೇಶದಿಂದ, 7 ಕೆ. ಜಿ. ದಿಂದ 12 ಕೆ. ಜಿ. ಸಾಮರ್ಥ್ಯದವರೆಗೆ ಒಳಗೊಂಡಿರುವ ಹೊಸ Bosch ಟಾಪ್ ಲೋಡ್ ವಾಷಿಂಗ್ ಮಷಿನ್ ಗಳ ಶ್ರೇಣಿಯನ್ನು ಪರಿಚಯಿಸುವ ಮೂಲಕ ತನ್ನ ಉತ್ಪನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಿದೆ. ಈ ಬಿಡುಗಡೆ ಭಾರತದಲ್ಲಿನ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಲಾಂಡ್ರಿ ವಿಭಾಗಗಳಲ್ಲಿ ಒಂದಾದ Boschನ ತಂತ್ರಾತ್ಮಕ ವಿಸ್ತರಣೆಯನ್ನು ಸೂಚಿಸುತ್ತದೆ.
ಮೌಲ್ಯಾಧಾರಿತದಿಂದ ಪ್ರೀಮಿಯಂ ಬೆಲೆ ಮಾದರಿಗಳವರೆಗೆ ವ್ಯಾಪಿಸಿರುವ ಈ ಹೊಸ ಟಾಪ್ ಲೋಡ್ ವಾಷಿಂಗ್ ಮಷಿನ್ ಶ್ರೇಣಿ, ವಿಭಾಗದ ಬಳಕೆಯನ್ನು ವೇಗಗೊಳಿಸುವುದರ ಜೊತೆಗೆ, ಹೆಚ್ಚಿನ ಪ್ರಮಾಣದ ಟಾಪ್ ಲೋಡ್ ವಾಷಿಂಗ್ ಮಷಿನ್ ಮಾರುಕಟ್ಟೆಯಲ್ಲಿ Boschನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ. ಉದ್ಯಮ ವರದಿಗಳ ಪ್ರಕಾರ, ಅನುಕೂಲತೆ, ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಸ್ಮಾರ್ಟ್ ತಂತ್ರಜ್ಞಾನಗಳತ್ತ ಗ್ರಾಹಕರ ಒಲವು ಹೆಚ್ಚುತ್ತಿರುವುದರಿಂದ ಟಾಪ್ ಲೋಡ್ ವಾಷಿಂಗ್ ಮಷಿನ್ ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಇನ್ನಷ್ಟು ಸಮಗ್ರ ಉತ್ಪನ್ನ ಶ್ರೇಣಿ, ಬಲವಾದ ತಾಂತ್ರಿಕ ಸಾಮರ್ಥ್ಯ ಮತ್ತು ವಿವಿಧ ಬೆಲೆ ಶ್ರೇಣಿಗಳಲ್ಲಿ ಸುಲಭ ಲಭ್ಯತೆಯೊಂದಿಗೆ, ಭಾರತದಲ್ಲಿನ ಟಾಪ್ ಲೋಡ್ ವಾಷಿಂಗ್ ಮಷಿನ್ ವಿಭಾಗದ ಮುಂದಿನ ಬೆಳವಣಿಗೆಯ ಅಲೆಯನ್ನು ಆಕ್ರಮಣಕಾರಿ ರೀತಿಯಲ್ಲಿ ಸೆಳೆಯಲು BSH ಸಜ್ಜಾಗಿದೆ.
ಈ ವಿಸ್ತರಣೆ ಭಾರತದಲ್ಲಿನ BSHನ ಲಾಂಡ್ರಿ ವ್ಯವಹಾರದಲ್ಲಿ ಕಂಡುಬರುತ್ತಿರುವ ಬಲವಾದ ಬೆಳವಣಿಗೆಯ ಹಿನ್ನೆಲೆಯಲ್ಲಿದೆ. 2026 ರ ಮೊದಲ ತ್ರೈಮಾಸಿಕದಲ್ಲಿ (Q1), ಹಿಂದಿನ ವರ್ಷದ ಹೋಲಿಕೆಯಲ್ಲಿ Boschನ ಟಾಪ್ ಲೋಡ್ ವಾಷಿಂಗ್ ಮಷಿನ್ ವಿಭಾಗವು ದ್ವಿಅಂಕಿ ಪ್ರಮಾಣದ ಬಲವಾದ ಬೆಳವಣಿಗೆಯನ್ನು ದಾಖಲಿಸಿದ್ದು, ಎಲ್ಲಾ ಮಾರಾಟ ವಾಹಿನಿಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಒಟ್ಟಾರೆ ಲಾಂಡ್ರಿ ವಿಭಾಗವು ಸಹ 50% ಪ್ರಮಾಣದ ಆರೋಗ್ಯಕರ ವಾಲ್ಯೂಮ್ ಬೆಳವಣಿಗೆಯನ್ನು ಕಂಡಿದೆ.
ಈ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ BSH Home Appliances ಕಂಪನಿಯ ಸೈಫ್ ಖಾನ್, ವ್ಯವಸ್ಥಾಪಕ ನಿರ್ದೇಶಕ & ಸಿಇಒ ಅವರು, “ಭಾರತದ ಲಾಂಡ್ರಿ ವಿಭಾಗವು ವೇಗವಾಗಿ ರೂಪಾಂತರಗೊಳ್ಳುತ್ತಿದೆ. BSH Home Appliances ತನ್ನ ಇನ್ನಷ್ಟು ಬಲವಾದ ಮತ್ತು ಸಮತೋಲನಗೊಂಡ ಉತ್ಪನ್ನ ಪೋರ್ಟ್ಫೋಲಿಯೊ ಮೂಲಕ ಈ ಬೆಳವಣಿಗೆಗೆ ಮುನ್ನಡೆ ನೀಡಲು ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಟಾಪ್ ಲೋಡ್ ವಾಷಿಂಗ್ ಮಷಿನ್ ಶ್ರೇಣಿಯ ವಿಸ್ತರಣೆಯ ಮೂಲಕ, ನಾವು ಪ್ರೀಮಿಯಂ Bosch ತಂತ್ರಜ್ಞಾನವನ್ನು ವಿವಿಧ ಬೆಲೆ ಮಾದರಿಗಳಲ್ಲಿ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ವಿಶೇಷವಾಗಿ, ಸೆಮಿ-ಆಟೋಮ್ಯಾಟಿಕ್‌ನಿಂದ ಸಂಪೂರ್ಣ ಸ್ವಯಂಚಾಲಿತ ವಾಷಿಂಗ್ ಮಷಿನ್‌ಗಳತ್ತ ವೇಗವಾಗಿ ವರ್ಗಾವಣೆಯಾಗುತ್ತಿರುವ ಟಿಯರ್-2 ಮತ್ತು ಟಿಯರ್-3 ಮಾರುಕಟ್ಟೆಗಳಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ,” ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ, ಫಾರ್ ಇಂಡಿಯಾ’ ದೃಷ್ಟಿಕೋನದೊಂದಿಗೆ ಈ ಶ್ರೇಣಿಯನ್ನು ಭಾರತೀಯ ಮನೆಗಳ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದು ಸ್ಮಾರ್ಟ್, ಶಕ್ತಿಶಾಲಿ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಟಾಪ್ ಲೋಡ್ ವಾಷಿಂಗ್ ಮಷಿನ್ ಮಾರಾಟವನ್ನು ಮೂರರಷ್ಟು ಹೆಚ್ಚಿಸಿ, ಮಾರುಕಟ್ಟೆ ಹಂಚಿಕೆಯನ್ನು ದ್ವಿಗುಣಗೊಳಿಸಿ, ಈ ವಿಭಾಗದಲ್ಲಿ ಮುಂಚೂಣಿ ಸಾಧಿಸುವುದು ನಮ್ಮ ಗುರಿಯಾಗಿದೆ,” ಎಂದು ಹೇಳಿದರು.