ಪ್ಯಾನ್ ಇಂಡಿಯಾ ಅಲ್ಲ.. ಕಂಟೆಂಟ್ ಈಸ್ ಕಿಂಗ್!

ಸಿನಿಮಾ: ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಹುಚ್ಚು, ನಟರು ನಿರ್ದೇಶಕರುಗಳಿಗೂ ತಲೆಗೇರಿತ್ತು. ಪ್ಯಾನ್ ಇಂಡಿಯಾ ಅಂತ ಹೋಗಿ ಗಳಿಸಿದ್ದಕ್ಕಿಂತ ಹೆಚ್ಚಾಗಿ ಕಳಕೊಂಡಿದ್ದೇ ಹೆಚ್ಚು. ಆದ್ರೆ, ಕ್ವಾಲಿಟಿ ಪ್ಯಾನ್ ಇಂಡಿಯಾಗೆ ತಲೆಕೆಡಿಸಿಕೊಳ್ಳದೆ ಒಳ್ಳೆಯ ಕಂಟೆಂಟ್‌ ಇರೋ ಸಿನಿಮಾ ಮಾಡಿದ್ರೆ, ಯಾವುದೇ ಪ್ರಚಾರ ಕೂಡ ಬೇಕಾಗಿಲ್ಲ ಅನ್ನೋದನ್ನ ಕೆಲ ಸಿನಿಮಾಗಳು ತೋರಿಸಿಕೊಟ್ಟಿವೆ.

ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಚಿತ್ರ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ನಿರ್ದೇಶಕ ಕೂಡ ಪ್ಯಾನ್ ಇಂಡಿಯಾ ಅಂತ ಹಿಂದೆ ಹೋಗದೆ, ಕೇವಲ ಕಥೆ ಕೇಳಿದ್ದಕ್ಕಷ್ಟೇ ಖರ್ಚು ಮಾಡಿದ್ದಾರೆ. ಇನ್ನು ಕನ್ನಡ ಸಿನಿಮಾ ಪ್ರೇಮದ ಊರಲಿ ಸಿನಿಮಾ ಕನಿಷ್ಠದಲ್ಲಿ ಕನಿಷ್ಠ ಬಜೆಟ್ ಸಿನಿಮಾ. ಅನಗತ್ಯವಾಗಿ ಸಿಂಗಲ್ ರೂಪಾಯಿ ಕೂಡ ಹೆಚ್ಚು ವ್ಯಯ ಮಾಡಿಲ್ಲ. ಆದ್ರೆ ಈ ಸಿನಿಮಾ ಈಗ ಮೋಡಿ ಮಾಡಿ ಪ್ಯಾನ್ ಇಂಡಿಯಾಗೆ ಪ್ರಮೋಷನ್ ಪಡೆದುಕೊಂಡಿದೆ.

ಇನ್ನೂ ಟಾಕ್ಸಿಕ್ ಸಿನಿಮಾ ಗೊತ್ತಲ್ಲ. ನಿರ್ಮಾಪಕರು, ನಟರು ಪ್ಯಾನ್ ಇಂಡಿಯಾ ಅಮಲು ನೆತ್ತಿಗೇರಿಸಿಕೊಂಡು ಅಬ್ಬರಿಸಿದ್ದೇ ಅಬ್ಬರಿಸಿದ್ದು. ಆದ್ರೇನ್ ಬಂತು.ಇದ್ರಿಂದ ನಂಬಿಕೆ ಕಳೆದುಕೊಂಡ್ರೇ ವಿನಹ, ಜನ ಥಿಯೇಟರ್‌ನಲ್ಲಿ ಕುಳಿತುಕೊಳ್ಳೋ ಸಿನಿಮಾ ಮಾಡಲಿಲ್ಲ. ಅದಕ್ಕೇ ಹೇಳೋದು ಕಂಟೆಂಟ್ ಈಸ್ ಆಲ್ವೇಸ್ ಕಿಂಗ್ ಅಂತ.

₹128 ಕೋಟಿ ಬಜೆಟ್
ಕಲೆಕ್ಷನ್‌ 3 ದಿನಕ್ಕೆ ₹300 ಕೋಟಿ
2 ಕೋಟಿ ಬಜೆಟ್
ಕಲೆಕ್ಷನ್ 12 ದಿನಕ್ಕೆ ₹20 ಕೋಟಿ
₹500 ಕೋಟಿ ಬಜೆಟ್
ಒಟ್ಟು ಕಲೆಕ್ಷನ್ – ₹300 ಕೋಟಿ

Leave a Reply

Your email address will not be published. Required fields are marked *