ನಟ ಪ್ರಜ್ವಲ್ ದೇವರಾಜ್ ವಿರುದ್ಧ ಕರಾವಳಿ ಚಿತ್ರತಂಡ ಗರಂ

ಸಿನಿಮಾ: ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಕುರಿತು ಹೊಸ ವಿವಾದವೊಂದು ಸದ್ದು ಮಾಡುತ್ತಿದೆ. ನಟ ಪ್ರಜ್ವಲ್ ದೇವರಾಜ್ ವಿರುದ್ಧ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಚಿತ್ರಕ್ಕಾಗಿ ದೈಹಿಕ ರೂಪಾಂತರ ಮಾಡಿಕೊಳ್ಳುವುದಾಗಿ ಪ್ರಜ್ವಲ್ ದೇವರಾಜ್ ಮೊದಲೇ ಭರವಸೆ ನೀಡಿದ್ದರು. ಆದರೆ ನಂತರ ಆ ಮಾತಿನಂತೆ ನಡೆದುಕೊಳ್ಳದೇ, ಸಂಭಾವನೆ ವಿಚಾರದಲ್ಲಿ ಹಠ ಹಿಡಿದಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ಇನ್ನು ಡಬ್ಬಿಂಗ್ ವಿಚಾರವೂ ಆರಂಭದಲ್ಲೇ ಪ್ರಜ್ವಲ್ ದೇವರಾಜ್ ಅವರ ಗಮನಕ್ಕೆ ತರಲಾಗಿತ್ತು. ಆದರೂ ತಮ್ಮವರ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ತೊಂದರೆ ಉಂಟು ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಬೆಳವಣಿಗೆ ಕುರಿತು ‘ಕರಾವಳಿ’ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಕೂಡ ಸ್ಪಷ್ಟನೆ ನೀಡಿ, ತಮ್ಮ ನಿಲುವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

ಈ ಆರೋಪಗಳಿಗೆ ನಟ ಪ್ರಜ್ವಲ್ ದೇವರಾಜ್ ಅವರ ಪ್ರತಿಕ್ರಿಯೆ ಇನ್ನಷ್ಟೇ ಹೊರಬೀಳಬೇಕಿದೆ. ಎರಡೂ ಪಕ್ಷಗಳ ಅಭಿಪ್ರಾಯದ ಬಳಿಕವೇ ವಿವಾದದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.

Leave a Reply

Your email address will not be published. Required fields are marked *