ಮೈಕ್ರೋ ಸ್ಕಿಲ್‌ಪ್ರೆನ್ಯೋರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ ಮೂಲಕ ಕೊಡಗು ಮತ್ತು ಮೈಸೂರು ಪ್ರದೇಶದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಉಪಕ್ರಮಗಳು

ಮೈಸೂರು, 8 ಆಗಸ್ಟ್, 2026: ಎಂಟರ್ಪ್ರೆನ್ಯೋರ್ಶಿಪ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಈಡಿಐಐ), ಅಹಮದಾಬಾದ್ ಕರ್ನಾಟಕದ ಮೈಸೂರು ಮತ್ತು ಕೊಡಗು ಪ್ರದೇಶಗಳಲ್ಲಿ ಮೈಕ್ರೋ ಸ್ಕಿಲ್‌ಪ್ರೆನ್ಯೋರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಂಎಸ್‌ಡಿಪಿ) ಅನುಷ್ಠಾನಗೊಳಿಸಲು ಪ್ರತ್ಯಗ್ರ ಫೌಂಡೇಶನ್ ಜೊತೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಈ ಕಾರ್ಯಕ್ರಮದ ಅನುಷ್ಠಾನ ಚೌಕಟ್ಟಿನಡಿ ಮೈಸೂರು ಮತ್ತು ಕೊಡಗು ಪ್ರದೇಶಗಳ ಗ್ರಾಮೀಣ ಜನಸಂಖ್ಯೆಯ ಕ್ರಮವಾಗಿ 58.50% ಮತ್ತು 85.39% ಜನರನ್ನು ತಲುಪುವ ಗುರಿ ಹೊಂದಲಾಗಿದೆ. ಈ ಉಪಕ್ರಮವು ಈ ಪ್ರದೇಶಗಳ ಶ್ರೀಮಂತ ಕೃಷಿ ಮತ್ತು ಕುಶಲಕಲೆ ಪರಂಪರೆ, ಕೌಶಲ್ಯ ಹೊಂದಿರುವ ಗ್ರಾಮೀಣ ಸಮುದಾಯಗಳು ಹಾಗೂ ಮಾರುಕಟ್ಟೆ ಸಾಮರ್ಥ್ಯ ಹೊಂದಿರುವ ಸ್ಥಳೀಯವಾಗಿ ಲಭ್ಯವಿರುವ ಮತ್ತು ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಪಡೆದ ಉತ್ಪನ್ನಗಳ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಇದರ ಪರಿಣಾಮವಾಗಿ, ಕರಕುಶಲ ವಸ್ತುಗಳು, ಆಹಾರ ಮತ್ತು ಕೃಷಿ ಆಧಾರಿತ ಉತ್ಪನ್ನಗಳು ಹಾಗೂ ಗೃಹೋಪಯೋಗಿ ಸಾಮಗ್ರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯಮಗಳನ್ನು ವಿಸ್ತರಿಸಲು ನೆರವು ನೀಡಲಾಗುತ್ತದೆ. ಇವುಗಳಲ್ಲಿ ಕಾಫಿ ಮತ್ತು ಕಾಫಿ ಆಧಾರಿತ ಉತ್ಪನ್ನಗಳೂ ಸೇರಿವೆ.

ಈಡಿಐಐನ ಮಹಾನಿರ್ದೇಶಕ ಡಾ. ಸುನಿಲ್ ಶುಕ್ಲಾ ಅವರು ಮಾತನಾಡಿ, “ಫಲಾನುಭವಿಗಳಿಗೆ ಉತ್ಪನ್ನ ಅಭಿವೃದ್ಧಿ, ಮಾರುಕಟ್ಟೆ ಸಂಪರ್ಕ, ಹಣಕಾಸು ಸೌಲಭ್ಯಗಳ ಲಭ್ಯತೆ, ಉದ್ಯಮ ಅಭಿವೃದ್ಧಿ ಮತ್ತು ತಂತ್ರಜ್ಞಾನ ಬೆಂಬಲವನ್ನು ಒದಗಿಸಲಾಗುವುದು. ಈ ಮೂಲಕ ಉದ್ಯಮಗಳ ಬೆಳವಣಿಗೆಗೆ ಸಂಬAಧಿಸಿದ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ನೆರವಾಗಲಾಗುವುದು,” ಎಂದು ಹೇಳಿದರು.

ಮೈಸೂರು-ಕೊಡಗು ಪ್ರದೇಶದ ಸಂಸದರಾದ ಹಿಸ್ ಹೈನೆಸ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, “ಮೈಸೂರು ಮತ್ತು ಕೊಡಗು ಪ್ರದೇಶಗಳಲ್ಲಿ ಮೈಕ್ರೋ ಸ್ಕಿಲ್‌ಪ್ರೆನ್ಯೋರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಂಎಸ್‌ಡಿಪಿ) ಉಪಕ್ರಮಗಳನ್ನು ಅನುಷ್ಠಾನಗೊಳಿಸಲು ಈಡಿಐಐ ಮತ್ತು ಪ್ರತ್ಯಗ್ರ ಫೌಂಡೇಶನ್ ನಡುವೆ ಸ್ಪಷ್ಟ ಗುರಿಗಳನ್ನು ಹೊಂದಿರುವ ಕಾರ್ಯತಂತ್ರದ ಅನುಷ್ಠಾನ ಚೌಕಟ್ಟನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ಆಳವಾದ ವಿಶ್ಲೇಷಣೆಯ ಆಧಾರದ ಮೇಲೆ ರೂಪಿಸಲಾಗಿದ್ದು, ಇದು ಖಂಡಿತವಾಗಿಯೂ ಸ್ಪಷ್ಟ ಮತ್ತು ಪರಿಣಾಮಕಾರಿ ಫಲಿತಾಂಶಗಳಿಗೆ ಕಾರಣವಾಗಲಿದೆ ಎಂಬ ವಿಶ್ವಾಸ ನನಗಿದೆ,” ಎಂದು ಹೇಳಿದರು.

ಕರ್ನಾಟಕದ ಮೈಸೂರು ಮತ್ತು ಕೊಡಗು ಪ್ರದೇಶಗಳಲ್ಲಿ ಮೈಕ್ರೋ ಸ್ಕಿಲ್‌ಪ್ರೆನ್ಯೋರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಂಎಸ್‌ಡಿಪಿ) ಅನುಷ್ಠಾನಗೊಳಿಸಲು ಈಡಿಐಐ, ಅಹಮದಾಬಾದ್ ಮತ್ತು ಪ್ರತ್ಯಗ್ರ ಫೌಂಡೇಶನ್ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ. ಈ ಒಪ್ಪಂದಕ್ಕೆ ಈಡಿಐಐನ ಮಹಾನಿರ್ದೇಶಕ ಡಾ. ಸುನಿಲ್ ಶುಕ್ಲಾ ಮತ್ತು ಪ್ರತ್ಯಗ್ರ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ವಿಶ್ವನಾಥ್ ಎನ್.ಆರ್. ಸಹಿ ಹಾಕಿದರು. ಈ ಸಂದರ್ಭದಲ್ಲಿ ಈಡಿಐಐನ ಸಿಎಸ್‌ಆರ್ ಪಾಲುದಾರಿಕೆ ವಿಭಾಗದ ನಿರ್ದೇಶಕ ಡಾ. ರಾಮನ್ ಗುಜ್ರಾಲ್; ಪ್ರತ್ಯಗ್ರ ಫೌಂಡೇಶನ್‌ನ ನಿರ್ದೇಶಕ ಶ್ರೀ ಕಂಠರಾಜ್ ಅರಸ್ ಮತ್ತು ಪ್ರತ್ಯಗ್ರ ಫೌಂಡೇಶನ್‌ನ ನಿರ್ದೇಶಕ ಶ್ರೀ ರಾಮಶಾಸ್ತಿç ಅಂಬರೀಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *