ಸ್ಕ್ರಿಪ್ಟ್ ಸಮರ ಸುಖಾಂತ್ಯ: ಮನಸ್ತಾಪ ಮರೆತು ಕೈಕುಲುಕಿದ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ

ಸಿನಿಮಾ: ಲವ್ ಮಾಕ್ಟೇಲ್ 3 ಬಿಡುಗಡೆಯ ನಂತರ ಕಥೆಯ ವಿಚಾರಕ್ಕೆ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ಮತ್ತು ಗುರು ದೇಶಪಾಂಡೆ-ರಾಘವೇಂದ್ರ ನಾಯಕ್ ನಡುವೆ ಕದನ ಶುರುವಾಗಿತ್ತು. ನ್ಯಾಯಾಲಯದ ಮೆಟ್ಟಿಲನ್ನೇರುವ ಮಾತುಗಳನ್ನು ಡಾರ್ಲಿಂಗ್ ಕೃಷ್ಣ ಹೇಳಿದ್ದರು.

ಮತ್ತೊಂದು ಕಡೆ ಬೆಳೆದ ಮೇಲೆ ಕೀಳಾಗಿ ಮಾತನಾಡ್ತಾರೆ ಎಂದು ಗುರು ದೇಶಪಾಂಡೆ ಗುಡುಗಿದ್ದರು. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ, ನೂತನ ಅಧ್ಯಕ್ಷರಾದ ಜಯಮಾಲಾ ಅವರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ನಡೆದಿದ್ದು, ಸಂಧಾನ ಫಲಪ್ರದವಾಗಿದೆ. ಈ ಮೂಲಕ ಸಣ್ಣದೊಂದು ವಿರಸ ಈಗ ಸುಖಾಂತ್ಯ ಕಂಡಿದೆ.

ಚಿತ್ರರಂಗದ ಏಳಿಗೆಗಾಗಿ ಸಂಧಾನಕ್ಕೆ ಸ್ಪಂದಿಸಿದ ಗುರು ದೇಶಾಪಾಂಡೆ ಹಾಗೂ ರಾಘವೇಂದ್ರ ನಾಯಕ್. ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಸಮರ ಸುಖಾಂತ್ಯ, ಮನಸ್ತಾಪ ಮರೆತು ಕೈಕುಲುಕಿದ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ

Leave a Reply

Your email address will not be published. Required fields are marked *