ಅಕ್ಷಯ ತೃತೀಯಗೆ ಅಷ್ಟಲಕ್ಷ್ಮೀ ನಾಣ್ಯ ಸಂಗ್ರಹ ನಾವರಣಗೊಳಿಸಿದ ಭೀಮ ಗೋಲ್ಡ್

ಬೆಂಗಳೂರು: ಆಭರಣ ನಾವೀನ್ಯತೆಯೊಂದಿಗೆಸಾಂಸ್ಕೃತಿಕ ಕಥೆ ಹೇಳುವಿಕೆಯನ್ನು ಒಗ್ಗೂಡಿಸುವ ದಿಸೆಯಲ್ಲಿ , ಭೀಮಗೋಲ್ಡ್ ತನ್ನ ಅಷ್ಟಲಕ್ಷ್ಮೀ ನಾಣ್ಯ ಸಂಗ್ರಹವನ್ನು ಅಕ್ಷಯ ತೃತೀಯದಅಂಗವಾಗಿ ಅನಾವರಣಗೊಳಿಸಿದೆ. ಇದರಿಂದ ಬಂಗಾರವನ್ನು ಕೇವಲಖರೀದಿಯ ವಸ್ತುವನ್ನಾಗಿರಿಸದೆ, ಸಮೃದ್ಧಿ, ಭಕ್ತಿ ಮತ್ತು ಬಳೆಕೆಯಉದ್ದೇಶದ ಆಳವಾದ ಸಂಕೇತವಾಗಿ ಸ್ಥಾಪಿಸಲಾಗಿದೆ.

ಭಾರತದಲ್ಲಿ ಅತ್ಯಂತ ಮಹತ್ವದ ಚಿನ್ನ ಖರೀದಿಯ ಹಬ್ಬಗಳಲ್ಲಿಒಂದಾದ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಈ ಸಂಗ್ರಹದಅನಾವರಣವಾಗಿದ್ದು, ಗ್ರಾಹಕರ ವರ್ತನೆಯಲ್ಲಿ ಬದಲಾಗುತ್ತಿರುವ ಸಾಂಸ್ಕೃತಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಅಕ್ಷಯತೃತೀಯದಿಂದ ಎಲ್ಲರಲ್ಲಿ ಖರೀದಿ ಉತ್ಸಾಹವು ಹೆಚ್ಚುತ್ತಿದ್ದರೂ, ಶುದ್ಧವ್ಯವಹಾರಿಕ ಖರೀದಿಗಿಂತ, ಅರ್ಥಪೂರ್ಣ ಮತ್ತು ಉದ್ದೇಶಪೂರಿತಖರೀದಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.

ಸಾಂಪ್ರದಾಯಿಕವಾಗಿ ಅಕ್ಷಯ ತೃತೀಯವು ಸಂಕಲ್ಪ, ನಂಬಿಕೆ ಮತ್ತುಸಮೃದ್ಧಿಯೊಂದಿಗೆ ಮಹತ್ವಾಕಾಂಕ್ಷೆಯ ಸಂಬಂಧ ಹೊಂದಿದ್ದು, ಇದುಬಂಗಾರವನ್ನು ಖರೀದಿಸುವ ಸಂಪೂರ್ಣ ವಹಿವಾಟಿನ ಕ್ರಿಯೆಯನ್ನುಮೀರಿ ವಿಸ್ತರಿಸಲ್ಪಟಿದೆ. ಅಷ್ಟಲಕ್ಷ್ಮೀ ನಾಣ್ಯಗಳನ್ನು ಆಳವಾದಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸುವ ಹಾಗೆ ಪರಿಕಲ್ಪನೆ ಮಾಡಲಾಗಿದ್ದು , ವಿಶಿಷ್ಟ ಅರ್ಥ ಮತ್ತು ಸಂಕಲ್ಪವನ್ನುಹೊಂದುವಂತೆ ಪ್ರತಿಯೊಂದು ನಾಣ್ಯವನ್ನು ವಿನ್ಯಾಸಗೊಳಿಸಲಾಗಿದೆ. ಆಂತರಿಕ ಮೌಲ್ಯದ ಜೊತೆಗೆ ಭಾವನಾತ್ಮಕ, ಸಾಂಸ್ಕೃತಿಕ ಮತ್ತುಆಧ್ಯಾತ್ಮಿಕ ಅನುರಣನವನ್ನು ನೀಡುವ ಆಭರಣಗಳ ಕಡೆಗೆಗಮನಾರ್ಹವಾಗಿ ಬದಲಾಗುತ್ತಿರುವ ಗ್ರಾಹಕರ ವಿಕಸೀತ ಆದ್ಯತೆಗಳಜೊತೆಗೆ ಈ ಉಪಕ್ರಮವು ಹೊಂದಿಕೆಯಾಗುತ್ತದೆ.

Leave a Reply

Your email address will not be published. Required fields are marked *