ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡಲು ರೈತರು ಸಿದ್ಧರಿಲ್ಲ

ರಾಮನಗರ: ಬಿಡದಿ ಉಪನಗರ ಯೋಜನೆಗಾಗಿ ಸರಕಾರ ಅನ್ಯಾಯವಾಗಿ ಫಲವತ್ತಾದ ಕೃಷಿ ಭೂಮಿ ಕಸಿದುಕೊಳ್ಳುತ್ತಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚಿಸಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಭೈರಮಂಗಲದಲ್ಲಿ ರೈತರ ವೇದಿಕೆಯಲ್ಲಿ ಪಾಲ್ಗೊಂಡು ಅವರಿಗಾಗಿ ನಿರೀಕ್ಷಿಸಿದರು.

ವಿಧಾನಸೌಧಕ್ಕೆ ಚರ್ಚೆಗೆ ಕರೆದಿದ್ದ ಮುಖ್ಯಮಂತ್ರಿಗಳು ಬಿಡದಿಗೆ ಬರಬೇಕೆಂದು ಪತ್ರ ಬರೆದಿದ್ದರು. ಆದರೆ, ನೊಂದ ರೈತರ ಸಮ್ಮುಖದಲ್ಲಿ ಚರ್ಚೆ ನಡೆಯಬೇಕೆಂದು ನಾನು ವಿನಂತಿ ಮಾಡಿದ್ದೆ. ಆದರೆ ಅವರಿಗೆ ‘ಬಿಡುವಿಲ್ಲದ’ ಕಾರಣಕ್ಕೆ ಸಭೆಯಲ್ಲಿ ನಾನೊಬ್ಬನೇ ರೈತರೊಂದಿಗೆ ಸಂವಾದ ನಡೆಸಿದೆ. ಮುಖ್ಯಮಂತ್ರಿಗಳ ಗೈರು ಹಾಜರಿ ರೈತರ ಸಮಸ್ಯೆಗಳಿಗೆ ಉತ್ತರವಲ್ಲ ಮತ್ತು ಪರಿಹಾರವೂ ಅಲ್ಲ. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡಲು ರೈತರು ಸಿದ್ಧರಿಲ್ಲ.

ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು ಅವರು, ಮಾಗಡಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎ. ಮಂಜುನಾಥ್ ಅವರು, ಶಾಸಕರಾದ ಶ್ರೀ ಹೆಚ್.ಟಿ.ಮಂಜುನಾಥ್ ಅವರು, ಶ್ರೀ ಸಿ.ಎನ್. ಮಂಜೇಗೌಡರು, ಮಾಜಿ ಶಾಸಕರಾದ ಡಾ. ಕೆ.ಅನ್ನದಾನಿ ಅವರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಶ್ರೀ ಹೆಚ್.ಎಂ.ರಮೇಶ್ ಗೌಡರು, ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡರು, ಪಕ್ಷದ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀ ಜಯಮುತ್ತು ಅವರು ಸೇರಿದಂತೆ ಅನೇಕ ಮುಖಂಡರು, ಅಸಂಖ್ಯಾತ ನೊಂದ ರೈತ ಕುಟುಂಬಗಳ ಅಕ್ಕತಂಗಿಯರು, ಅಣ್ಣ ತಮ್ಮಂದಿರು, ಯುವಜನರು ಈ ಸಭೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *