ಬೆಂಗಳೂರು: ಸುಸ್ಥಿರ ನಗರ ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ನಾಗರಿಕರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರು ಇಂದು ವಿಧಾನಸೌಧದಿಂದ ಕನಕಪುರ ರಸ್ತೆಯ ಟರ್ಮಿನಲ್ ಸ್ಟೇಷನ್ ವರೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದರು.
ಬೆಂಗಳೂರಿನಾದ್ಯಂತ ಸುಸಜ್ಜಿತ ಮೆಟ್ರೋ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಬದ್ಧವಾಗಿದ್ದು, ಪ್ರಸ್ತುತ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಟ್ರಾಫಿಕ್ ರಹಿತ ಸಂಚಾರ ಸೌಲಭ್ಯವನ್ನು ಕಲ್ಪಿಸುವುದು ನಮ್ಮ ಗುರಿಯಾಗಿದೆ.
ಭವಿಷ್ಯದ ಪ್ರಗತಿ, ಆರ್ಥಿಕ ದೃಢತೆ ಹಾಗೂ ಗುಣಮಟ್ಟದ ಬದುಕಿನ ವಿಶ್ವದರ್ಜೆಯ ಸಾರಿಗೆ ಸಂಪರ್ಕ ವ್ಯವಸ್ಥೆ ಅಗತ್ಯವಾಗಿದೆ. ಬೆಂಗಳೂರನ್ನು ಎಲ್ಲರ ಪ್ರಥಮ ಆಯ್ಕೆಯನ್ನಾಗಿಸುವುದು ಮುಖ್ಯಮಂತ್ರಿಗಳ ಆದ್ಯತೆಯಾಗಿದೆ. ನಗರವನ್ನು ಹಸಿರುಮಯ, ಸ್ಮಾರ್ಟರ್ ಆಗಿಸುವ ಜೊತೆಜೊತೆಗೆ ಪ್ರತಿಯೊಬ್ಬ ನಾಗರಿಕನಿಗೂ ಸುಗಮ ಸಂಪರ್ಕವನ್ನು ಖಚಿತಪಡಿಸಲು ಸರ್ಕಾರವು ಕಾರ್ಯೋನ್ಮುಕವಾಗಿದೆ.