MLA ಜೊತೆ ರೌಡಿಶೀಟರ್ ಬರ್ತ್‌ಡೇ ಸೆಲೆಬ್ರೇಷನ್.!

ಬೆಂಗಳೂರು: ಶಾಸಕನ ಜೊತೆ ರೌಡಿಶೀಟರ್ ಬರ್ತ್‌ಡೇ ಸೆಲೆಬ್ರೇಷನ್ ಮಾಡಿಕೊಂಡಿರುವ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಅಲೂರಿನಲ್ಲಿ ರೌಡಿಶೀಟರ್ ದಾಸನ ಅದ್ದೂರಿ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಒಂದೇ ಹಾರದಲ್ಲಿ ಶಾಸಕ ವಿಶ್ವನಾಥ್, ಬಿಜೆಪಿ ಮುಖಂಡರು ಮತ್ತು ದಾಸ ಕಾಣಿಸಿಕೊಂಡಿದ್ದಾರೆ. ಈ ವೇಳೆ ದಾಸನಿಗೆ ಕೇಕ್ ಕಟ್ ಮಾಡಿಸಿ ಶಾಸಕ ವಿಶ್ವನಾಥ್ ಶುಭಾಶಯ ಕೋರಿದ್ದಾರೆ.

ಪ್ರತಿ ವರ್ಷ ಹುಟ್ಟುಹಬ್ಬ ಆಚರಣೆ ಮೂಲಕ ಸುದ್ದಿಯಾಗುತ್ತಿರುವ ರೌಡಿಶೀಟರ್ ದಾಸ ಕಳೆದ ಬಾರಿ ದಾಸನ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಇನ್ಸ್‌ಪೆಕ್ಟರ್ ನಾಗರಾಜ್ ಅಮಾನತು ಪ್ರಕರಣ ಸದ್ದು ಮಾಡಿತ್ತು..! ಯಲಹಂಕ, ನೆಲಮಂಗಲ, ದಾಸರಹಳ್ಳಿ ಭಾಗಗಳಲ್ಲಿ ಲ್ಯಾಂಡ್ ಗ್ರಾಬಿಂಗ್ ಆರೋಪಗಳ ಹಿನ್ನೆಲೆ ಯಲಹಂಕ, ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ದಾಸ ಕಿಂಗ್ ಮೇಕರ್ ದಾಸ. ಶಾಸಕರ ಜೊತೆ ದಾಸನ ಹುಟ್ಟುಹಬ್ಬ ಆಚರಣೆ ವೇಳೆ ಸಿಗದ ಪೊಲೀಸರು

ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ರೌಡಿ ಬರ್ತ್‌ಡೇ ಸಂಭ್ರಮ. ಪೋಟೋ, ವಿಡಿಯೋ ವೈರಲ್ ಬೆನ್ನಲ್ಲೆ ಮಾಹಿತಿ ಕಲೆ ಹಾಕುತ್ತಿರುವ ಮಾದನಾಯಕನಹಳ್ಳಿ ಪೊಲೀಸರು.

Leave a Reply

Your email address will not be published. Required fields are marked *