ಬೆಂಗಳೂರು: ನಾಡಿನ ಪ್ರತಿ ಹೆಣ್ಣು ಸ್ವತಂತ್ರವಾಗಿ ಸಂಚರಿಸಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ನೆಮ್ಮದಿಯ ಜೀವನವನ್ನು ಕಾಣಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯು ಇಂದಿಗೆ ಯಶಸ್ವಿಯಾಗಿ 3 ವರುಷಗಳನ್ನು ಪೂರೈಸಿದೆ.
ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಉದ್ದೇಶಗಳಿಗಾಗಿ ಈವರೆಗೆ 753.7 ಕೋಟಿ ಬಾರಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ ರೂ.19,771 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಈ ಯೋಜನೆಯು ನವ ಇತಿಹಾಸ ಸೃಷ್ಟಿಸಿದೆ.
ಶಕ್ತಿ ಯೋಜನೆ ಜಾರಿಯಿಂದಾಗಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 40% ಹೆಚ್ಚಾಗಿದ್ದು ಅಲ್ಲದೇ, ಒಟ್ಟು ಪ್ರಯಾಣಿಕರಲ್ಲಿ 60% ಮಹಿಳೆಯರೇ ಇದ್ದಾರೆ.
ಯೋಜನೆಯೊಂದು ನಮ್ಮ ನಿರೀಕ್ಷೆಗೂ ಮೀರಿ ಅರ್ಹರನ್ನು ತಲುಪಿ, ಸಮಾಜದಲ್ಲಿ ಧನಾತ್ಮಕ ಬದಲಾವಣೆ ಮೂಡಿಸುತ್ತಿರುವುದು ನನಗೆ ತೃಪ್ತಿ ತಂದಿದೆ.